ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಾಮ ಹೇಳಿಕೆಗೆ ಸಿಖ್ಖರ ಸ್ವಾಗತ

Last Updated 29 ಜನವರಿ 2015, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ಭಾರತವು ಧಾರ್ಮಿಕ ಸಹಿಷ್ಣುತೆಗೆ ಉತ್ತೇಜನ ನೀಡಬೇಕು ಎಂದು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಹೇಳಿರುವುದನ್ನು ಸಿಖ್‌ ಹಕ್ಕುಗಳ ಗುಂಪು ಸ್ವಾಗತಿಸಿದೆ.

ಒಬಾಮ ಅವರು ಈಚೆಗೆ ನವ­ದೆಹಲಿಗೆ ಭೇಟಿ ನೀಡಿದ್ದ ಸಂದರ್ಭ­ದಲ್ಲಿ ಮಾಡಿದ ಭಾಷಣ­ದಲ್ಲಿ ಭಾರ­ತವು ಮೊದಲಿನಿಂದಲೂ ಧಾರ್ಮಿಕ ವಿಷಯಗಳಲ್ಲಿ ನಂಬಿಕೆ ಹೊಂದಿದೆ. ಅದಕ್ಕೆ ಭಂಗ ತರುವ ರೀತಿಯಲ್ಲಿ ನಡೆದುಕೊಳ್ಳಬಾರದು. ಎಲ್ಲ ಧರ್ಮ­ಗಳನ್ನು ಸಮಾನವಾಗಿ ಕಾಣುವುದು ಸೂಕ್ತ ಎಂದು ಉಲ್ಲೇಖಿಸಿದ್ದರು.

ಇದನ್ನು ಸ್ವಾಗತಿಸಿರುವ ಅಮೆರಿ­ಕದ ‘ಸಿಖ್‌ ಫಾರ್ ಜಸ್ಟಿಸ್‌’ ವೇದಿಕೆ ಕಾನೂನು ಸಲಹೆಗಾರ ಗುರು­ಪತ್ವಂತ್ ಸಿಂಗ್‌ ಪನ್ನುನ್‌,  ಭಾರತ ಧಾರ್ಮಿಕ ಸ್ವಾತಂತ್ರ್ಯ ನೀಡಿರುವು­ದನ್ನು ಸ್ವಾಗತಿಸುವುದಾಗಿ ಹೇಳಿರು­ವುದು ಅಮೆರಿಕ ಸಿಖ್‌ ಸಮುದಾ­ಯದ ಧ್ವನಿಯಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT