ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳ: ಕ್ರೀಡೆ, ಹಿಂಸೆಯಲ್ಲ

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನಮ್ಮೂರಲ್ಲಿ ಗದ್ದೆ ಉಳುಮೆಗೆ ಹೆಚ್ಚಿನವರು ಕೋಣ, ಎತ್ತು ಬಳಸುತ್ತಾರೆ. ಉಳುಮೆ ಮಾಡು­ವಾಗ ಎತ್ತು, ಕೋಣಗಳಿಗೆ ಬಾರುಕೋಲಿನಿಂದ ಅಷ್ಟಿಷ್ಟು ಹೊಡೆಯು­ತ್ತಾರೆ. ನಮ್ಮ ಸರ್ಕಾರ ಅದನ್ನೂ ನಿಷೇಧಿಸಿ ಬಿಡಲಿ. ಏಕೆಂದರೆ, ಹಾಗೆ ಬಾರಿಸುವಾಗ ಆ ಮೂಕ ಪ್ರಾಣಿಗಳಿಗೆ ಹಿಂಸೆ ಆಗುತ್ತದೆ! ಕಾರ್ಯಸಾಧುವಲ್ಲದ ಈ ಮನವಿ ಮಂಡಿಸಲು ಒಂದು ಕಾರಣ ಇದೆ. ಕೋಣಗಳಿಗೆ ಹಿಂಸೆ­ಯಾಗು­ತ್ತದೆ ಎಂಬ ಕಾರಣಕ್ಕೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕ್ರೀಡೆ ಕಂಬಳ ನಿಷೇಧಿಸಿ ಜಿಲ್ಲಾಡಳಿತ ಆದೇಶಿಸಿದೆ. ಜಲ್ಲಿ­ಕಟ್ಟು ಆಚರಣೆಗೆ ಸಂಬಂಧಿಸಿದ ಪ್ರಕ­ರಣ­ದಲ್ಲಿ ಸುಪ್ರೀಂ­ಕೋರ್ಟ್‌ ನೀಡಿದ ತೀರ್ಪು ಅನು­ಸರಿಸಿ, ಕಂಬಳವನ್ನೂ ನಿಷೇಧಿಸಲಾಗಿದೆ.

ಕಂಬಳವನ್ನು ನಿಷೇಧಿಸಿದ ಜಿಲ್ಲಾಡಳಿತ, ಅದನ್ನು ಒಂದು ಪ್ರಾಣಿಹಿಂಸಾ ಕೃತ್ಯ ಎಂದು ಪರಿಗಣಿಸಿ­ರಬೇಕು. ಆದರೆ ಕಂಬಳ ಒಂದು ಕ್ರೀಡೆ ಎಂದು ಅರ್ಥ ಮಾಡಿ­ಕೊಂಡಂತಿಲ್ಲ. ಕಂಬಳ ಆಯೋಜಿಸು­ವವರು, ಅಲ್ಲಿ ಕೋಣ ಓಡಿಸುವವರು ಆ ಪ್ರಾಣಿ­ಗಳಿಗೆ ಹಿಂಸೆಯಾಗಲಿ ಎಂಬ ಉದ್ದೇಶದಿಂದ ಆ ಕಾರ್ಯ ಮಾಡುತ್ತಿಲ್ಲ. ಕಂಬ­ಳ­­­ವನ್ನು ಕ್ರೀಡಾ­ಸ್ಫೂರ್ತಿಯಿಂದ ಆಯೋಜಿಸ­ಲಾಗು­­ತ್ತದೆ. ನೂರು ಮೀಟರ್‌ ಓಟದ ಸ್ಪರ್ಧೆ­ಯಲ್ಲಿ ಮನುಷ್ಯ ದೈಹಿಕ ವೇದನೆಯನ್ನು ಮೀರಿ, ಓಡುತ್ತಾ­ನಲ್ಲ? ಹಾಗೇ, ಕಂಬಳದ ಕೋಣಗಳನ್ನು ಓಡಿಸ­ಲಾ­ಗುತ್ತದೆ. ಕಂಬಳದ ಕೋಣಗಳು ಮತ್ತು ಅದನ್ನು ಓಡಿಸು­ವವನ ನಡುವೆ ಒಂದು ಸಾವಯವ ಸಂಬಂಧ ಇದೆ. ಅಲ್ಲಿ ಹಿಂಸೆಯ ಎಸಳೂ ಇಲ್ಲ. ಆಳುವವರು ಇದನ್ನು ಅರ್ಥ­ಮಾಡಿ­ಕೊಳ್ಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT