ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿ ಖರ್ಚಿಗೆ ‘ಸಾಲ’

ಅಕ್ಷರ ಗಾತ್ರ

ಕೆ.ಎನ್‌. ವೆಂಕಟಗಿರಿ ಅವರ ‘ಒಬ್ಬರಲ್ಲ, ನೂರಾರು ತಬರರಿದ್ದಾರೆ!’ (ಚರ್ಚೆ, ಜುಲೈ 30) ಲೇಖನಕ್ಕೆ ಪೂರಕವಾದ ನನ್ನ ಅನುಭವದ ಪತ್ರ. ವಿಧವೆಯೂ, ಆರ್ಥಿಕವಾಗಿ ದುರ್ಬಲಳೂ ಆದ ನಾನು ನನ್ನ ಎರಡು ಮಕ್ಕಳೊಂದಿಗೆ ಸ್ವಾವಲಂಬಿ ಜೀವನ ನಡೆಸುತ್ತಿದ್ದೇನೆ. ನನ್ನ ಸಂಸಾರ ನಿರ್ವಹಣೆಗಾಗಿ ಮತ್ತು ಮಕ್ಕಳ ಶಿಕ್ಷಣಕ್ಕಾಗಿ  ಸಾಲ ಮಾಡಿಕೊಂಡಿದ್ದರಿಂದ ನನ್ನ ತವರು ಮನೆಯವರು ಸಾಲ ತೀರಿಸುವುದಕ್ಕಾಗಿ ತಮಗಿದ್ದ 1 ಎಕರೆ ಜಮೀನು ನನ್ನ ಹೆಸರಿಗೆ ಬರೆದುಕೊಟ್ಟು ಒಂದು ವರ್ಷವಾಗಿದೆ. ಅಂದಿನಿಂದ ಕಂದಾಯ ಇಲಾಖೆಯ ಅನೇಕ (ಅಗೋಚರ) ಪ್ರಕ್ರಿಯೆಗಳಾದ ತಿದ್ದುಪಡಿ, ಮೋಜಿಣಿ,  ಪೋಡಿ, ವಂಶವೃಕ್ಷ ದೃಢೀಕರಣ ಇತ್ಯಾದಿಗಳಿಂದಾಗಿ ಇದುವರೆವಿಗೂ ನನ್ನ ಹೆಸರಿಗೆ ಖಾತೆ ಬದಲಾವಣೆಗಾಗಿ ಅಗತ್ಯವಿರುವ  11 (ಇ) ನಕಾಶೆ ಕೂಡ ಬಂದಿರುವುದಿಲ್ಲ.

ಮೊದಲು ಮಾಡಿಕೊಂಡ ಸಾಲದ ಜೊತೆಗೆ ಕಂದಾಯ ಕಚೇರಿ ‘ಖರ್ಚು’ ಸಲುವಾಗಿ ಮಾಡಿಕೊಂಡ ಸಾಲದಿಂದಾಗಿ ದಿಕ್ಕು ತೋಚದಂತಾಗಿದ್ದೇನೆ. ನನ್ನ ಮಕ್ಕಳ ಬದುಕು, ಬರಹ, ಜೀವನಗಳಿಗಾಗಿ ನನ್ನ ಜೀವ ಉಳಿಸಿಕೊಂಡಿದ್ದೇನೆ. ನನ್ನಂಥ ಅನೇಕ ‘ಫಲಾನುಭವಿ’ಗಳು ಈ ಇಲಾಖೆಯಿಂದ ಸಂಕಷ್ಟಕ್ಕೆ ಒಳಗಾದವರಿದ್ದಾರೆ. ನಾನು ಕೇವಲ ಸಂಕೇತ. ಈ ಇಲಾಖೆಗೆ ಕಾಯಕಲ್ಪ ಒದಗಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸುವುದು ಸಾಧ್ಯವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT