ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿ ನಿರ್ವಹಣೆ ಹೇಗೆ?

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ದೀರ್ಘವಾಗಿ ಉಸಿರಾಡಿ. ಒಮ್ಮೆ ಕಣ್ಣು ಬಿಡಿ. ದೀರ್ಘವಾಗಿ ಉಸಿರಾಡಿ. ಮತ್ತೆ ಕಣ್ಣು ಮುಚ್ಚಿಕೊಳ್ಳಿ. ಹೀಗೇ ಆಫೀಸಿನ ಕೋಣೆಯೊಳಗೆ ಹೋಗಿ. ಯಾವುದೇ ಮಾನಸಿಕ ಉದ್ವಿಗ್ನತೆಯಿಲ್ಲದೇ ಅಲ್ಲಿ ಓಡಾಡಿ. ಎಲ್ಲರೂ ಅಲ್ಲಿ ಗೊಂಬೆಗಳಂತೆ ಅವರವರ ಕೆಲಸವನ್ನು ಮಾಡುತ್ತಿರುವುದನ್ನು ಗಮನಿಸಿ.

ನಿಮಗೆ ಎಲ್ಲರೂ ಕಾಣುತ್ತಿದ್ದಾರೆ. ಆದರೆ ನೀವು ಮಾತ್ರ ಅವರಿಗೆ ಕಾಣುತ್ತಿಲ್ಲ. ಹಾಗಾಗಿ ನಿಮಗಿಷ್ಟ ಬಂದವರನ್ನು ನಿಮಗಿಷ್ಟ ಬಂದಂತೆ ಮಾತನಾಡಿಸಿ. ನಿಮ್ಮ ಜಾಗದಲ್ಲಿ ಕುಳಿತುಕೊಳ್ಳಿ.

ಅಲ್ಲಿ ನಿರುಮ್ಮಳವಾಗಿ, ನಿಮ್ಮ ಪಾಲಿನ ಕೆಲಸವನ್ನು ನೀಟಾಗಿ ಮಾಡಿ ಮುಗಿಸಿ. ಅಲ್ಲಿರುವವರಲ್ಲಿ ಅವರೆಲ್ಲ ನಿಮ್ಮ ಹತ್ತಿರ ಹೇಗೆ ವರ್ತಿಸಬೇಕು ಅಂತ ನೀವು ಅಂದುಕೊಳ್ಳುತ್ತೀರೋ ಹಾಗೆಯೇ ವರ್ತಿಸುತ್ತಿರುವುದನ್ನು ಗಮನಿಸಿ ಮತ್ತು ಅದನ್ನು ಮನಃಪೂರ್ವಕವಾಗಿ ಅನುಭವಿಸಿ.

ಆ ಸಂತೋಷವನ್ನು ನಿಮ್ಮ ಮನಸ್ಸಿನಲ್ಲಿ ತುಂಬಿಕೊಳ್ಳಿ. ಮತ್ತು ನಿಮಗೆ ಯಾರನ್ನು ಕಂಡರೆ ಬೇಸರವೋ, ಕೋಪವೋ ಅವರೆದುರಿಗೆ ಹೋಗಿ ನಿಂತುಕೊಳ್ಳಿ. ಅವರ ಕಣ್ಣುಗಳಲ್ಲಿ ದೃಷ್ಟಿ ನೆಟ್ಟು, ನಿಮ್ಮ ಮನಸ್ಸಿಗೆ ಅನ್ನಿಸಿದ್ದನ್ನು ಅವರೆದುರಿಗೆ ಸ್ಪಷ್ಟವಾಗಿ ಮತ್ತು ನೇರವಾಗಿ ಹೇಳಿ. ಪದೇ ಪದೇ ಅದನ್ನು ಅವರಿಗೆ ಹೇಳಿ.

ನಂತರ ನೀವೇ ಅವರನ್ನು ಕ್ಷಮಿಸಿರುವುದಾಗಿಯೂ ಹೇಳಿ. ಎಲ್ಲರೂ ನಿಮ್ಮೊಟ್ಟಿಗೆ ಎಷ್ಟೊಂದು ಆತ್ಮೀಯತೆಯಿಂದ ವರ್ತಿಸುತ್ತಿದ್ದಾರಲ್ಲ ಅಂತ ಅಂದುಕೊಳ್ಳಿ. ನೀವೂ ಅವರೊಟ್ಟಿಗೆ ಅಷ್ಟೇ ಆತ್ಮೀಯತೆಯಿಂದ ವರ್ತಿಸಿ. ಇವಿಷ್ಟಾಗುವಾಗ ನಿಮ್ಮ ಮನಸ್ಸಿಗೆ ನೆಮ್ಮದಿ ಉಂಟಾಗುವುದನ್ನು ಗಮನಿಸಿಕೊಳ್ಳಿ. ಅದನ್ನು ಅನುಭವಿಸಿ. ನಿಮ್ಮನ್ನು ನೀವು ಅಭಿನಂದಿಸಿಕೊಳ್ಳಿ. ನಂತರ ದೀರ್ಘವಾಗಿ ಉಸಿರಾಡಿ. ಕಣ್ಣನ್ನು ಬಿಡಿ.

ಹೀಗೇ ನಿಮಗೆ ಬೇಕು ಬೇಕಾದ ಕೋಣೆಯೊಳಗೆ ಹೋಗಿ, ನಿಮಗೆ ಬೇಕಾದಷ್ಟು ಹೊತ್ತು ಅಲ್ಲಿಇರಿ. ಪ್ರತಿಯೊಂದು ಕೋಣೆಗೆ ಹೋಗಿ ಬಂದ ನಂತರ ದೀರ್ಘವಾಗಿ ಉಸಿರಾಡಿ.

ಕಣ್ಣನ್ನುಬಿಡಿ.ಇವಿಷ್ಟನ್ನೂ ನೀವು ಕೇವಲ ಹತ್ತು ನಿಮಿಷಗಳಲ್ಲಿ ಮಾಡಿ ಮುಗಿಸಬಹುದು. ಇದನ್ನು ಪ್ರತಿದಿನ ಅಭ್ಯಾಸ ಮಾಡಿ. ಮೂರು ವಾರಗಳ ಸತತ ಅಭ್ಯಾಸ ಆದರೆ  ನಿಮ್ಮಲ್ಲಿ ಬಹಳಷ್ಟು ಧನಾತ್ಮಕ ಬದಲಾವಣೆಗಳಾಗಿರುವುದು ಅನುಭವಕ್ಕೆ ಬರುತ್ತದೆ. ನಿಮ್ಮ ಗಮನಕ್ಕೆ ಬರುವುದಕ್ಕೂ ಮೊದಲೇ ನಿಮ್ಮನ್ನು ನೋಡುತ್ತಿರುವವರು ನಿಮ್ಮಲ್ಲಿ ಉಂಟಾಗುತ್ತಿರುವ ಧನಾತ್ಮಕ ಬದಲಾವಣೆಗಳನ್ನು ನಿಮ್ಮ ಗಮನಕ್ಕೆ ತರುತ್ತಾರೆ.

ಅವರ ಒಳ್ಳೆಯ ಮಾತುಗಳನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳಿ. ನಂತರ ಇದನ್ನು ಅಭ್ಯಾಸ ಮಾಡುವಾಗ ಕೋಪ, ಅಸೂಯೆ, ಕಿರಿಕಿರಿ, ದ್ವೇಷ, ಮುಂತಾದ ಕೋಣೆಗಳು ಕಿರಿದಾಗುತ್ತಿರುವಂತೆ ಭಾವಿಸಿಕೊಳ್ಳಿ. ಆರೋಗ್ಯ, ಕೆಲಸ, ತೋಟ, ನೆಮ್ಮದಿ/ಶಾಂತಿ, ಮುಂತಾದ ಧನಾತ್ಮಕವಾದ ಕೋಣೆಗಳು ವಿಶಾಲವಾಗುತ್ತಿರುವಂತೆ ಅಂದುಕೊಳ್ಳಿ.

ಕೆಲವು ತಿಂಗಳ ನಂತರ  ನಿಮ್ಮ ಮನದ ಮಹಾ ಮನೆಯೊಳಗೆ ಸ್ವಚ್ಛ, ಸುಂದರ, ವಿಶಾಲವಾದ  ಬೋರ್ಡುಗಳ ಕೋಣೆಗಳಷ್ಟೇ ಇರುವುದು ಗಮನಕ್ಕೆ ಬರುತ್ತದೆ. ಅವುಗಳಿಗೆ ನಿಮಗಿಷ್ಟ ಬಂದ ಬಣ್ಣಗಳನ್ನು ಹಚ್ಚಿರಿ. ಹೆಚ್ಚೆಚ್ಚು ಹೊತ್ತು ಧನಾತ್ಮಕವಾದ ಕೋಣೆಯೊಳಗೆ ಇರುವುದನ್ನು ರೂಢಿಸಿಕೊಳ್ಳಿ. ಯಾವುದೋ ಸಂದರ್ಭದಲ್ಲಿ ಉಂಟಾದ ನಿರಾಸೆಯನ್ನೋ, ಭಯವನ್ನೋ, ಕೋಪವನ್ನೋ, ನಿರುತ್ಸಾಹವನ್ನೋ ಉಳಿದ ಸನ್ನಿವೇಶಗಳಿಗೆ, ಉಳಿದ ಕೋಣೆಯೊಳಗೆ ತಂದುಕೊಳ್ಳಬೇಡಿ.

ಎಲ್ಲ ಸಂದರ್ಭಗಳನ್ನೂ ಪ್ರತ್ಯೇಕವಾಗಿ ಗಮನಿಸುತ್ತಾ ಇರಿ ಮತ್ತು ಪ್ರತ್ಯೇಕವಾಗಿಯೇ ಆಯಾ ಸನ್ನಿವೇಶದಲ್ಲಿ ಭಾಗವಹಿಸುವ ಅಭ್ಯಾಸವನ್ನು ಮಾಡಿಕೊಳ್ಳಿ. ಸ್ವಯಂ ಸಂಮೋಹನವನ್ನು ಅಭ್ಯಾಸ ಮಾಡುವವರಿಗೆ ಇದು ಸಹಜವಾಗಿಯೇ ಒಲಿದಿರುತ್ತದೆ! ನೀವೂ ಸಹ ನಿತ್ಯವೂ ಇದನ್ನುಅಭ್ಯಾಸ ಮಾಡಿ.

ಎಲ್ಲ ಧನಾತ್ಮಕ ಬದಲಾವಣೆಗಳನ್ನೂ ಮನಃಪೂರ್ವಕವಾಗಿ ಒಪ್ಪಿಕೊಳ್ಳಿ. ನಿಮ್ಮ ಬಗ್ಗೆ ನೀವು ಹೆಮ್ಮೆ ಪಟ್ಟುಕೊಳ್ಳಿ. ಪ್ರತಿದಿನ ಸಾಯಂಕಾಲ ಹತ್ತು ನಿಮಿಷಗಳಷ್ಟಾದರೂ ನಿಮ್ಮ ಮನಸ್ಸಿನ ಕೋಣೆಗಳ ಪ್ರವಾಸದ (ಧ್ಯಾನದ)ಅಭ್ಯಾಸವನ್ನು ಮುಂದುವರೆಸಿ.
ಮಾಹಿತಿಗೆ: 9481405184     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT