ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ನಿರ್ಮಾಣಕ್ಕೆ ಶೀಘ್ರ ಚಾಲನೆ

ಒಂದೇ ಸೂರಿನಡಿ ಎಲ್ಲ ಸೌಲಭ್ಯ ಪಡೆಯಲು ಪಡಸಾಲೆ ಯೋಜನೆ
Last Updated 4 ಮಾರ್ಚ್ 2015, 11:42 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಒಂದೇ ಸೂರಿನಡಿ ಜನತೆಗೆ ತಾಲ್ಲೂಕು ಕಚೇರಿಯ ಎಲ್ಲ ಸೌಲಭ್ಯಗಳನ್ನು ನೀಡುವ ಸರ್ಕಾರದ ನೂತನ ಯೋಜನೆ ಪಡಸಾಲೆ ಯೋಜನೆ ಅನುಷ್ಠಾನಕ್ಕೆ ಅಗತ್ಯ ಕಟ್ಟಡ ನಿರ್ಮಾಣಕ್ಕೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಪ್ರಭಾರ ಉಪವಿಭಾಗಾಧಿಕಾರಿ ಮಹದೇವು ತಿಳಿಸಿದರು.

ಮಂಗಳವಾರ ತಾಲ್ಲೂಕು ಕಚೇರಿ ಆವರಣದಲ್ಲಿ ಪಡಸಾಲೆ ಯೋಜನೆ ಚಾಲನೆಗೆ ಅಗತ್ಯ ಸ್ಥಳ ಪರಿಶೀಲನೆ ನಡೆಸಿದ ಅವರು, ಈ ಪಡಸಾಲೆ ಯೋಜನೆಯಡಿ ಜನರು ಅಟಲ್‌ಜಿ ಜನಸ್ನೇಹಿ, ಆಧಾರ್‌, ಪಡಿತರಚೀಟಿ, ಭೂಮಿಕೇಂದ್ರ, ಮೋಜಣಿ ಸೇವೆ ಸೇರಿದಂತೆ 5 ಕೌಂಟರ್‌ಗಳನ್ನು ಒಂದೇ ಸೂರಿನಡಿ ದೊರೆಯುವಂತೆ ಮಾಡಲಾಗುವುದು.

ಇಲ್ಲಿ ಜನತೆ ಅರ್ಜಿ ಬರೆಯಲು ಅವಕಾಶ ಸೇರಿದಂತೆ ಶೌಚಾಲಯ, ಕುಡಿಯುವ ನೀರು ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು.
ಜನತೆ ವಿವಿಧ ಅರ್ಜಿಗಳನ್ನು ಹಿಡಿದು ಸುತ್ತಾಡುವುದನ್ನು ತಪ್ಪಿಸಲುಈ ಹೊಸ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ತಹಶೀಲ್ದಾರ್‌ ಸಿ. ಮಹಾದೇವಯ್ಯ, ಶಿರಸ್ತೇದಾರ್‌ ಶ್ರೀನಿವಾಸ್‌, ಕಂದಾಯ ನಿರೀಕ್ಷಕ ವೆಂಕಟರಮಣಸ್ವಾಮಿ, ನಿರ್ಮಿತಿ ಕೇಂದ್ರ ಎಂಜಿನಿಯರ್‌ ಪ್ರದೀಪ್‌ಕುಮಾರ್‌ ಸರ್ವೆ ಇಲಾಖೆ ಕುಮಾರಸ್ವಾಮಿ, ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT