ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟು, ಕೆಡಹು

Last Updated 24 ಮೇ 2016, 19:30 IST
ಅಕ್ಷರ ಗಾತ್ರ

‘ಎಷ್ಟು ದಿನ ಉಳಿಯಲಿದೆ ಈ ಸ್ಕೈವಾಕ್?’ ಎಂಬ ಶೀರ್ಷಿಕೆಯ ವರದಿ (ಪ್ರ.ವಾ., ಮೇ 24) ಓದಿದಾಗ, ‘ಕಟ್ಟುವುದು, ಕೆಡಹುವುದು, ಮತ್ತೆ ಬಿಟ್ಟೋಡುವುದು...’ ಎಂಬ ಕವಿವಾಣಿ ನೆನಪಾಗುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಚೇರಿ ಮುಂಭಾಗದಲ್ಲಿ ನಿರ್ಮಿಸಬೇಕೆಂದಿರುವ ಸ್ಕೈವಾಕ್‌ನ ನಿರ್ಮಾಣವೇ ಇನ್ನೂ ಆರಂಭವಾಗಿಲ್ಲ; ಆಗಲೇ ಅದನ್ನು ಕೆಡಹುವ ಕುರಿತು ಚಿಂತನೆ ನಡೆಯುತ್ತಿದೆ! ಮಿನರ್ವ ವೃತ್ತದಿಂದ ಹಡ್ಸನ್ ವೃತ್ತದವರೆಗೆ ನಿರ್ಮಿಸಲಿರುವ ಮೇಲ್ಸೇತುವೆಯು ಈ ಭಾಗದ ಮೂಲಕ ಹಾದು ಹೋಗುವುದನ್ನು ಇದಕ್ಕಾಗಿ ನೆಪವನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಅಡುಗೆ ಆಗೋದಕ್ಕೆ ಮುಂಚೆ ಎಲೆ ಹಾಕಿದ ಹಾಗೆ!

ಮೇಲ್ಸೇತುವೆಯ ಎತ್ತರವನ್ನು ಮೀರಿ ಇಲ್ಲವೇ ಮೇಲ್ಸೇತುವೆಯ ಕೆಳಗೆ ಸ್ಕೈವಾಕ್‍ ನಿರ್ಮಿಸಲು ಸಾಧ್ಯವಿಲ್ಲವೆ? ಮೇಲ್ಸೇತುವೆ ನಿರ್ಮಾಣ ಸಂಸ್ಥೆ ತಂತ್ರಜ್ಞರೂ, ಸ್ಕೈವಾಕ್ ನಿರ್ಮಿಸುವ ಗುತ್ತಿಗೆದಾರ ಸಂಸ್ಥೆ ತಂತ್ರಜ್ಞರೂ ಒಟ್ಟಾಗಿ ಸೇರಿ, ನಿಷ್ಕರ್ಷೆ ಮಾಡಿ ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಬಹುದು. ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಆದರೆ, ಮನಸ್ಸು ಮಾಡಬೇಕಷ್ಟೆ?   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT