ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿತ ಚಿಕ್ಕದು ಕಂಟಕ ದೊಡ್ಡದು

Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಈ ವರ್ಷ ವಿಶ್ವ ಆರೋಗ್ಯದಿನವನ್ನು ಏ.7ರಂದು ಆಚರಿಸಲಾಯಿತು. ಈ ದಿನಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ  ‘ಕಡಿತ ಚಿಕ್ಕದು, ಆತಂಕ ದೊಡ್ಡದು’ ಎಂಬ ಎಚ್ಚರಿಕೆಯ ಘೋಷಣಾವಾಕ್ಯವನ್ನು ಪ್ರಕಟಿಸಿದೆ. ಸೊಳ್ಳೆ ಕಡಿತವೊಂದರಿಂದಲೇ ಲಕ್ಷಾಂತರ ಜನರು ಅನೇಕ ಬಗೆಯ ರೋಗಗಳಿಗೆ  ಬಲಿಯಾಗುತ್ತಿದ್ದಾರೆ. ಅದನ್ನು ತಪ್ಪಿಸಲು ಜಾಗೃತಿ ಮೂಡಿಸುವುದೇ ಈ ವರ್ಷದ ಧ್ಯೇಯವಾಕ್ಯವಾಗಿದೆ.  ‘ಸ್ಮಾಲ್‌ ಬೈಟ್‌–ಬಿಗ್‌ ಥ್ರೆಟ್‌’ ವಾಕ್ಯವು ನೈರ್ಮಲ್ಯದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎನ್ನುವುದನ್ನೇ ಬಿಂಬಿಸುತ್ತದೆ.

ಮಲೇರಿಯ ಕೇವಲ ಸಾವು – ನೋವುಗಳಿಗಷ್ಟೆ ಸೀಮಿತಗೊಳ್ಳದೆ ಮಾನವನ ದುಡಿಮೆ ದಿನಗಳನ್ನು ಕುಟುಂಬದ ಹಾಗೂ ದೇಶದ ಆರ್ಥಿಕ ಸ್ಥಿತಿಯನ್ನು ನಲುಗಿಸುತ್ತದೆ. ಜಗತ್ತಿನಲ್ಲಿ ಹುಟ್ಟುವ ಪ್ರತಿ ಸಾವಿರ ಸೊಳ್ಳೆಗಳಲ್ಲಿ ಒಂದಕ್ಕೆ ಮಾತ್ರ ಮಾನವನ ಮುಖ ನೋಡುವ ಭಾಗ್ಯ ದೊರಕುತ್ತದೆ. ಅಂತಹ ನೂರು ಸೊಳ್ಳೆಗಳಲ್ಲಿ ಒಂದಕ್ಕೆ ಮಾತ್ರ ರಕ್ತದ ರುಚಿ ನೋಡುವ ಅವಕಾಶ ಸಿಗುತ್ತದೆ. ಹೀಗಿರುವಾಗ ಸೊಳ್ಳೆಗಳ ಸಂಖ್ಯಾ ಬಲವನ್ನು ಊಹಿಸಿಕೊಳ್ಳುವುದೇ ಅಸಾಧ್ಯ. 

ಸೊಳ್ಳೆ ಮೂಲಕ ಹರಡುವ ಕಾಯಿಲೆಗಳು ಬಹಳ. ಅವುಗಳಲ್ಲಿ ಮುಖ್ಯವಾಗಿ ಅನಾಫಿಲಿಸ್‌ ಸೊಳ್ಳೆ – ಮಲೇರಿಯವನ್ನು ಕ್ಯುಲೆಕ್‌್ಸ ಸೊಳ್ಳೆ – ಮೆದುಳು ಜ್ವರ ಮತ್ತು ಆನೆಕಾಲು ರೋಗವನ್ನು; ಏಡಿಸ್‌ ಸೊಳ್ಳೆ – ಡೆಂಗ್ಯು ಹಾಗೂ ಚಿಕುನ್‌ ಗುನ್ಯ ಕಾಯಿಲೆಗಳನ್ನು ಹರಡುತ್ತದೆ. ಇತ್ತೀಚಿನ  ವರದಿಯಂತೆ ಭಾರತ ಒಂದರಲ್ಲೇ ಪ್ರತಿ ವರ್ಷ 17.8 ಲಕ್ಷ ಜನ ಮಲೇರಿಯದಿಂದ ಬಳಲಿ 1704 ಜನರು ಮರಣ ಹೊಂದಿದ್ದಾರೆ. ಡೆಂಗ್ಯೂ ಜ್ವರದಿಂದ 12 ಸಾವಿರ ಜನರು ತೊಂದರೆಗೊಳಗಾಗಿ 200 ಜನರು ಸತ್ತಿದ್ದಾರೆ.

ಇತಿಹಾಸ ಕಲಿಸಿದ ಪಾಠಗಳಿಂದ ನಾವು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ವಿವೇಚನೆಯಿಂದ ಪರಿಸರ ನಾಶಗೊಳಿಸದೆ, ಕೀಟಗಳಿಗೆ ಕಡಿವಾಣ ಹಾಕುವ ಮಾರ್ಗೋಪಾಯಗಳನ್ನು ಅನುಸರಿಸಬೇಕಾಗಿದೆ. ಸೊಳ್ಳೆಗಳು ಸಂತಾನ ವೃದ್ಧಿಮಾಡಿಕೊಳ್ಳುವುದೇ ನೀರಿನಿಂದ. ಕೊಳಚೆ ನೀರಿನಿಂದ, ನಿಂತ ನೀರಿನಿಂದ ಹೀಗಾಗಿ ನಾವು ಈ ತಾಣಗಳೇ ಅಲಭ್ಯವಾಗುವಂತೆ ಕ್ರಮಕೈಗೊಳ್ಳಬೇಕು.
 
ಪರಿಸರ ಸ್ವಚ್ಛತೆಯೇ ಸೊಳ್ಳೆ ನಿವಾರಣೆಯ ಮೂಲ ಮಂತ್ರ.

ಸೊಳ್ಳೆ ಸಂಹರಿಸುವ ಅತ್ಯುತ್ತಮ ಹಾದಿಗಳೆಂದರೆ:
*ಸ್ವಚ್ಛ ಪರಿಸರ
*ಉತ್ತಮ ಒಳಚರಂಡಿ ವ್ಯವಸ್ಥೆ
*ನೀರಿನ ಸೂಕ್ತ ನಿರ್ವಹಣೆ
*ನದಿ – ಕೆರೆ – ಕಾಲುವೆಗಳ ಸ್ವಚ್ಛತೆ
*ಅಣೆಕಟ್ಟು, ಕಟ್ಟಡ ನಿರ್ಮಾಣದಲ್ಲಿ ಸ್ವಚ್ಛತೆ
*ಮನೆ ಮತ್ತು ಸುತ್ತಲಿನ ಪರಿಸರದ  ನೈರ್ಮಲ್ಯ ಕಾಪಾಡುವುದು
*ಕಸ, ತ್ಯಾಜ್ಯಗಳ ಸೂಕ್ತ ವಿಲೇವಾರಿ
*ವಿವೇಚನೆಯಿಂದ ಕೀಟನಾಶಕಗಳ ಬಳಕೆ
*ಜೈವಿಕ ಹಾಗು ಜೀನ್‌ ತಂತ್ರಜ್ಞಾನದಿಂದ ಸೊಳ್ಳೆಗಳ ನಿಯಂತ್ರಣ
*ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಫ್ಯಾನ್‌ ಬಳಕೆಗಳಿಂದ ರಕ್ಷಣೆ.

ಈ ಎಲ್ಲಾ ಪರಿಣಾಮಕಾರಿಯಾದ ಮತ್ತು ಅಪಾಯಕಾರಿಯಲ್ಲದ ಸೊಳ್ಳೆ ನಾಶದ ವಿಧಾನಗಳನ್ನು ಸಮಯೋಚಿತವಾಗಿ, ವಿವೇಚನೆಯಿಂದ ಬಳಸಿದರೆ ನಾವು ಸೊಳ್ಳೆ  ಕಡಿತದಿಂದ ಹಾಗು ಸೊಳ್ಳೆ ಹರಡುವ ಕಾಯಿಲೆಗಳಿಂದ ಪಾರಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT