ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಮತದಾನ ಯಾರಿಂದ?

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು ನಗರ ವ್ಯಾಪ್ತಿಯ ಲೋಕಸಭಾ ಕ್ಷೇತ್ರಗಳ ವಿದ್ಯಾವಂತರು, ಐ.ಟಿ ಕಂಪೆನಿ ಉದ್ಯೋಗಿ­­­ಗಳು ಮತದಾನದ ದಿನ ಮೋಜು ಮಸ್ತಿಗೆ ತೆರಳಿದ್ದ ಕಾರಣ ಮತದಾನದ ಪ್ರಮಾಣ ಕಡಿಮೆ ಆಗಿದೆ ಎಂದು ಕೆಲವರು ವಿಶ್ಲೇಷಿಸುತ್ತಿ­ದ್ದಾರೆ. ಕೆಲವು ಮಾಧ್ಯಮಗಳಲ್ಲಿ ಈ ಧಾಟಿಯ ವರದಿ­ಗಳೂ ಬಂದಿವೆ. ಆದರೆ ಬಡವರು, ಅನ­ಕ್ಷರ­ಸ್ಥ­ರೆಲ್ಲರೂ ಮತ ಚಲಾಯಿಸಿದ್ದಾರೆ ಮತ್ತು ವಿದ್ಯಾ­ವಂತರಲ್ಲಿ ಬಹುಪಾಲು ಮಂದಿ ಮತದಾ­ನದಿಂದ ದೂರ ಉಳಿದಿದ್ದಾರೆ ಎಂಬ ಮಾತಿಗೆ ಆಧಾರ ಏನಿದೆ?

ಬೆಂಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಶೇಕಡ 52ರಿಂದ 55ರಷ್ಟು ಮತದಾನ ಆಗಿದೆ. ಇಲ್ಲಿನ ವಿದ್ಯಾ­ವಂ­ತರಲ್ಲಿ ಇಂತಿಷ್ಟು ಜನ ಮತ ಚಲಾಯಿಸಿ­ದ್ದಾರೆ, ಅನ­ಕ್ಷರಸ್ಥರು ಇಂತಿಷ್ಟು ಜನ ಮತ ಚಲಾಯಿಸಿದ್ದಾರೆ ಎಂದು ಖಚಿತವಾಗಿ ಹೇಳಲು ಯಾವುದೇ ಆಧಾರ ಇದುವರೆಗೂ ಲಭ್ಯವಾಗಿಲ್ಲ.

ನಗರದ ಮತದಾರರ ಪಟ್ಟಿ­ಯಲ್ಲೇ ದೋಷ ಇದೆ ಎಂಬ ಮಾತುಗಳನ್ನು ನಿವೃತ್ತ ಕಮಾಂಡರ್‌ ಪಿ.ಜಿ. ಭಟ್‌, ಸಾಮಾಜಿಕ ಕಾರ್ಯಕರ್ತ ಡಾ. ಅಶ್ವಿನ್‌ ಮಹೇಶ್‌ ಆಡಿದ್ದಾರೆ. ಮತದಾರರ ಪಟ್ಟಿ­ಯಲ್ಲಿ ಹೆಸರುಗಳ ಪುನ­ರಾ­ವರ್ತನೆ, ಮೃತ­ಪಟ್ಟ­ವರ ಹೆಸರು ಇನ್ನೂ ಉಳಿದುಕೊಂಡಿರು­ವುದು, ಕ್ಷೇತ್ರ­­ದಲ್ಲಿ ಇಲ್ಲದವರ ಹೆಸರು ಇರು­ವುದು ಸಾಕ­ಷ್ಟಿದೆ ಎಂಬ ಆರೋಪ­ಗಳು ಇವೆ. ಈ ಸಂಬಂಧ ಹೈಕೋ­ರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿತ್ತು.

ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ನಿವಾರಿಸಬೇಕು. ನಂತರವೂ ಮತ­ದಾನದ ಪ್ರಮಾಣ ಕಡಿಮೆ ಎಂದು ಕಂಡುಬಂದರೆ ವಿದ್ಯಾ­ವಂತರು ನಿಜಕ್ಕೂ ಮತದಾನದಿಂದ ದೂರ ಉಳಿ­ದಿದ್ದರೇ ಎಂಬುದನ್ನು ನಿಖರವಾಗಿ ಗುರುತಿಸ­ಬೇಕು. ವೃಥಾ ಆರೋಪ ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT