ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೆಗೂ ನಿಶ್ಚಯವಾದ ಭಾವಿ ಪತಿ

Last Updated 12 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಒಂದು ವರ್ಷದ ಡೇಟಿಂಗ್‌ ನಂತರ ಇಸ್ರೇಲಿ ಮಾಡೆಲ್‌ ಬಾರ್‌ ರಫೇಲಿ ತನ್ನ ಗೆಳೆಯ ಅದಿ ಎಜ್ರಾ ಅವರೊಂದಿಗೆ ಹಸಿಮಣೆಯೆರಲು ನಿಶ್ಚಯಿಸಿದ್ದಾರೆ.

‘ಸೂಪರ್‌ಮಾಡೆಲ್‌ ಬಾರ್‌ ರಫೇಲಿ ಹಾಗೂ ಉದ್ಯಮಿ ಅದಿ ಎಜ್ರಾ ಎಂಗೇಜ್‌ ಆಗಿದ್ದಾರೆ ಎಂದು ಹೇಳಲು ಖುಷಿಯಾಗುತ್ತಿದೆ’ ಎಂದು ರಫೇಲಿ ಅವರ ಪ್ರತಿನಿಧಿ ಈ ಸುದ್ದಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ತಮ್ಮ ಸ್ನೇಹಿತರ ಮುಖಾಂತರ ಇಬ್ಬರೂ ಕಳೆದ ವರ್ಷ ಭೇಟಿಯಾಗಿದ್ದರು. ಅಲ್ಲಿಂದ ಅವರಿಬ್ಬರ ಡೇಟಿಂಗ್ ಶುರುವಾಗಿ ‘ಇನ್‌ಸ್ಟಾಗ್ರಾಂ’ನಲ್ಲಿ ಇವರ ಲವ್ವಿ ಡವ್ವಿ ಜೋರಾಗಿ ನಡೆಯುತ್ತಿದೆ ಎಂದು ಅನೇಕ ಸಲ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇವರ ನಿಶ್ಚಿತಾರ್ಥದ ವಿಷಯ ಬಹಿರಂಗವಾಗುತ್ತಿದ್ದಂತೆಯೇ ರಫೇಲಿ ತನ್ನ ಭಾವಿಪತಿಗೆ ಚುಂಬಿಸುತ್ತಿರುವ ಕಪ್ಪು–ಬಿಳುಪಿನ ಛಾಯಾಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಇದಕ್ಕೂ ಮುಂಚೆ ರಫೇಲಿ, ಡೇವಿಡ್‌ ಷಾರ್ವೆಟ್‌ ಅವರೊಂದಿಗೆ ಡೇಟಿಂಗ್‌ ಮಾಡಿದ್ದರು.

ಮಾಡೆಲ್‌ ಗಿಸೆಲೆ ಬಂಡ್‌ಶೆನ್‌ ಅವರೊಂದಿಗಿನ ಬ್ರೇಕ್‌ಅಪ್‌ ನಂತರ ಲಿಯೊನಾರ್ಡೊ ಡಿಕ್ಯಾಪ್ರಿಯೊ ಅವರೊಂದಿಗೆ ರಫೇಲಿ ಹೆಸರು ತಳುಕು ಹಾಕಿಕೊಂಡಿತ್ತು. 2011ರಲ್ಲಿ ಲಿಯೊನಾರ್ಡೊ ಅವರೊಂದಿಗೂ ರಫೇಲಿ ಬ್ರೇಕ್‌ ಅಪ್‌ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT