ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡ್ಡಾಯ ಬೇಡ

Last Updated 20 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ನಮ್ಮದು ಪ್ರಜಾಪ್ರಭುತ್ವ ದೇಶ. ಮತ ಹಾಕುವ ಅಥವಾ ತಿರಸ್ಕರಿಸುವ ಸ್ವಾತಂತ್ರ್ಯ ಪ್ರತಿ ಪ್ರಜೆಗೂ ಇದೆ. ಆದರೆ ರಾಜ್ಯ ಸರ್ಕಾರ, ಪಂಚಾಯಿತಿ ಚುನಾವಣೆಯಲ್ಲಿ ಮತದಾನವನ್ನು ಕಡ್ಡಾಯ ಮಾಡಹೊರಟಿದೆ.  ಇದು ಸರಿಯಲ್ಲ.

ಜನಪ್ರತಿನಿಧಿಗಳು ದಕ್ಷರಾಗದೇ ಇದ್ದಾಗ, ರಾಜಕೀಯ ಪಕ್ಷಗಳೆಲ್ಲವೂ ಭ್ರಷ್ಟವಾದಾಗ ಜನ ಯಾರಿಗೆಂದು ಮತ ಹಾಕುತ್ತಾರೆ? ರಾಜಕೀಯ ಅಧೋಗತಿಗೆ ಇಳಿದಿರುವುದರಿಂದ ಜನ ಮತದಾನದ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ಇದರಿಂದ ಮತದಾನ ಪ್ರಮಾಣ ಕಡಿಮೆಯಾಗಬಹುದು ಎಂಬ ಭಯದಿಂದ ಸರ್ಕಾರ ಹೀಗೆ ಮಾಡಿರಬಹುದು.

ಇಂತಹ ಕ್ರಮದಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಚ್ಯುತಿ ಬರುತ್ತದೆ. ಮತದಾನ ಮಾಡದವರಿಗೆ ಶಿಕ್ಷೆ ನೀಡಲು ಸಾಧ್ಯವೇ ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಸರಿಯಾಗಿಯೇ ಇದೆ.  ಮತದಾನವನ್ನು ಕಡ್ಡಾಯ ಮಾಡುವುದು ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT