ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣು ತೆರೆಸುವ ಕಥೆ

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಸುಬ್ಬು ಹೊಲೆಯಾರ್ ಅವರ ಕಥೆ ನನಗೆ ಗೊತ್ತಿಲ್ಲದ ಲೋಕವನ್ನು ಪರಿಚಯಿಸಿತು. ಅವರ ಬಾಲ್ಯದ ಕಥೆಯನ್ನು ನಾನು ಸಿನಿಮ್ಯಾಟಿಕ್ ಹಾದಿಯಲ್ಲಿ ಕೊಂಡೊಯ್ದಿದ್ದೇನೆ. ನಗರದಲ್ಲಿ ಬೆಳೆದ ನನಗೆ ಅಸ್ಪೃಶ್ಯತೆಯನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ ಆಳಕ್ಕೆ ಹೊಕ್ಕು ನೋಡಿದಾಗ ‘ಕಣ್ಣು ಮುಚ್ಚಿ ಬದುಕುತ್ತಿರುತ್ತೇವೆ’ ಅನ್ನಿಸುತ್ತದೆ. ರಾಯಚೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ದಲಿತರಿಗೆ ಕ್ಷೌರ ಮಾಡುವುದಿಲ್ಲ ಎಂದಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಚೆನ್ನೈನಲ್ಲಿ ವಾಚ್ ಕಟ್ಟಿಕೊಂಡುಬಂದ ಎನ್ನುವ ಕಾರಣಕ್ಕೆ ದಲಿತ ಹುಡುಗನೊಬ್ಬನ ಕೈ ಕತ್ತರಿಸಿದ್ದರು.

ಈ ರೀತಿಯ ಗಂಭೀರ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಐದಾರು ಮಂದಿ ಮಾತ್ರ ನೋಡುತ್ತಾರೆ. ಮಾಧ್ಯಮದವರು ಗ್ಲಾಮರ್ ಎನ್ನುತ್ತಾರೆ. ಆ ಕಾರಣಕ್ಕೆ ನಾವು ಮತ್ತು ಕೆಲವು ಸಂಘಟನೆಗಳು ಚಿತ್ರವನ್ನು ಖಾಸಗಿಯಾಗಿ ಪ್ರದರ್ಶಿಸುವ ಮೂಲಕ ಜನರಿಗೆ ಮುಟ್ಟಿಸಲು ಪ್ರಯತ್ನಿಸುತ್ತಿದ್ದೇವೆ. ಈ ಪ್ರದರ್ಶನಗಳು ಹಾಕಿದ ಹಣವನ್ನು ಬಹುಪಾಲು ಹಿಂತಿರುಗಿವೆ.

ಮಾನವೀಯ ನೆಲೆ ಆಧಾರದಲ್ಲಿ ಸಿನಿಮಾದ ಕರಿಯ ಕಣ್ಣು ಬಿಟ್ಟಿದ್ದಾನೆ. ಇಲ್ಲಿ ಕರಿಯ ಓಟದ ದೃಶ್ಯದಲ್ಲಿ ಗೆದ್ದಿರಬಹುದು. ಆದರೆ ಆತನ ಓಟ ನಿರಂತರ ಮತ್ತು ಮತ್ತಷ್ಟು ಹೆಚ್ಚಬೇಕು. ಇಂಥ ಸಿನಿಮಾಗಳನ್ನು ಎಲ್ಲ ಸಮುದಾಯದವರೂ ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT