ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆಗಾರ ಕುನಾಲ್‌ ಕಪೂರ್‌

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನಟ ಕುನಾಲ್‌ ಕಪೂರ್‌ ಪೆನ್ನು ಹಿಡಿದಿದ್ದಾರೆ. 2012ರಲ್ಲಿ ತೆರೆಕಂಡಿದ್ದ ‘ಲವ್‌ ಶುವ್‌ ತೇಯ್‌ ಚಿಕನ್‌ ಖುರಾನಾ’ ಸಿನಿಮಾದಲ್ಲಿ ಕೊನೆಯದಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದ ಕುನಾಲ್‌ ಕ್ಯಾಮೆರಾ ಮೇಲಿನ ತಮ್ಮ ಗಮನವನ್ನು ಕೊಂಚ ಕೀಲಿಸಿ ಸ್ಕ್ರಿಪ್ಟ್‌ ಬರವಣಿಗೆಯಲ್ಲಿ ಮಗ್ನರಾಗಿದ್ದರು.

‘ಒಬ್ಬ ನಟನಾಗಿದ್ದುಕೊಂಡೂ ಕಳೆದ ಎರಡು ವರ್ಷಗಳಲ್ಲಿ ನಾನು ಎಂಟು ಹತ್ತು ಸ್ಕ್ರಿಪ್ಟ್‌ಗಳನ್ನು ಬರೆದಿದ್ದೇನೆ. ಬಹಳ ಜನ ಅದನ್ನು ಮೆಚ್ಚಿಕೊಂಡಿದ್ದು, ಸಿನಿಮಾಗಳಾಗಿ ರೂಪುಗೊಳ್ಳುತ್ತಿವೆ’ ಎಂದು ಕುನಾಲ್‌ ಐಎಎನ್‌ಎಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ನಾನು ಚಿತ್ರಕತೆ ಬರೆಯುವುದಿಲ್ಲ. ಆದರೆ ನನ್ನಲ್ಲಿ ಸಿನಿಮಾ ಆಗಬಲ್ಲ ಹಲವಾರು ಕತೆಗಳು ಇವೆ. ಅವುಗಳನ್ನು ಬರೆದಿಡುತ್ತೇನೆ. ಹಾಗೆ ಬರೆದಿಟ್ಟ ಎರಡು ಕತೆಗಳು ಸಿನಿಮಾಗಳಾಗಿ ರೂಪುಗೊಳ್ಳುತ್ತಿವೆ’ ಎಂದು ಖುಷಿಯಿಂದ ಹೇಳುತ್ತಾರೆ ಕುನಾಲ್‌.

‘ಈ ಎರಡು ಚಿತ್ರಗಳಲ್ಲಿ ಒಂದು ಸಂಗೀತ ಆಧಾರಿತವಾಗಿದೆ. ಇನ್ನೊಂದು ಡಕಾಯಿತಿ ಗುಂಪಿನ ಕುರಿತಾದ ಚಿತ್ರ’ ಎಂದು ಕತೆಯ ಬಗ್ಗೆ ಮಾಹಿತಿ ನೀಡುತ್ತಾರೆ ಅವರು. ಈ ಎಲ್ಲ ವಿವರಗಳನ್ನು ನೀಡಿಯೂ ಕುನಾಲ್‌, ಈ ಬಗ್ಗೆ ಹೆಚ್ಚು ವಿವರ ಬಹಿರಂಗಪಡಿಸಲು ಇಚ್ಛಿಸುವುದಿಲ್ಲ ಎಂದು ಹೇಳಲು ಮಾತ್ರ ಮರೆಯುವುದಿಲ್ಲ. ‘ದಯವಿಟ್ಟು ಅಧಿಕೃತವಾಗಿ ಘೋಷಣೆಯಾಗುವವರೆಗೆ ಕಾಯಿರಿ’ ಎಂಬುದು ಅವರ ವಿನಂತಿ.

ಕಳೆದ ಹತ್ತು ವರ್ಷಗಳನ್ನು ಬಣ್ಣದ ಜಗತ್ತಿನಲ್ಲಿ ಕಳೆದಿರುವ ಕುನಾಲ್‌ ವಿಭಿನ್ನ ರೀತಿಯ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಆದರೆ ಇದುವರೆಗೆ ಅವರು ನಿರ್ವಹಿಸಿದ ಪಾತ್ರಗಳ ಬಗ್ಗೆ ಕುನಾಲ್‌ಗೆ ಸಂಪೂರ್ಣ ತೃಪ್ತಿ ಇಲ್ಲವಂತೆ. ‘ಇದುವರೆಗಿನ ನನ್ನ ಪಾತ್ರಗಳ ಬಗ್ಗೆ ನನಗೆ ಸಂಪೂರ್ಣ ತೃಪ್ತಿ ಇಲ್ಲ. ಒಂದೊಮ್ಮೆ ನನ್ನ ವೃತ್ತಿಜೀವನ ನನಗೆ ಸಂಪೂರ್ಣ ಸಂತೋಷ ಕೊಟ್ಟಿದ್ದರೆ ಈಗಾಗಲೇ ನಾನು ಇನ್ನಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೆ’ ಎಂದಿದ್ದಾರೆ ಕುನಾಲ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT