ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನ ವಿರಾಮ ಉಲ್ಲಂಘನೆ

Last Updated 28 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಜಮ್ಮು (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆ ಗಡಿ ನಿಯಂತ್ರಣ ರೇಖೆ ಬಳಿ ಪಾಕಿ­-ಸ್ತಾನದ ಸೇನಾ ಪಡೆಗಳು ಸೋಮವಾರ ಭಾರತೀಯ ಸೇನಾ ಶಿಬಿರಗಳ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘನೆ ಮಾಡಿವೆ.

ಪಾಕ್‌ ಪಡೆಗಳ ದಾಳಿಗೆ ಭಾರತೀಯ ಪಡೆಗಳು ಪ್ರತ್ಯುತ್ತರ ನೀಡಿವೆ. ‘ಪಾಕ್‌ ದಾಳಿಗೆ ಪ್ರತಿಯಾಗಿ ಭಾರ­ತೀಯ ಪಡೆಗಳು ದಾಳಿ ನಡೆಸಿ­ದ್ದ­ರಿಂದ ಕೆಲ ಕಾಲದ ವರೆಗೆ ಗುಂಡಿನ ಚಕಮಕಿ ನಡೆಯಿತು’ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಗಿರಿರಾಜ್‌ ಸಿಂಗ್ ಅರ್ಜಿ ತಿರಸ್ಕೃತ
ಬೊಕಾರೊ, ಜಾರ್ಖಂಡ್ (ಪಿಟಿಐ):
ಹತ್ತು ದಿನಗಳ ಹಿಂದೆ ದ್ವೇಷ ಪ್ರಚೋದಿಸುವ ಭಾಷಣ ಮಾಡಿ ಜಾಮೀನುರಹಿತ ವಾರಂಟ್‌ಗೆ ಒಳಗಾಗಿರುವ ಬಿಜೆಪಿ ಮುಖಂಡ ಗಿರಿರಾಜ್‌ ಸಿಂಗ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲ­ಯವು ತಳ್ಳಿ ಹಾಕಿದೆ.

ನವಡಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಿಂಗ್‌ ದ್ವೇಷ ಪ್ರಚೋದಿಸುವ ಭಾಷಣ ಮಾಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಉಪವಿಭಾಗದ ನ್ಯಾಯಾಧೀಶರು ಕಳೆದ 23ರಂದು ಜಾಮೀನುರಹಿತ ವಾರಂಟ್‌ ಹೊರಡಿಸಿ­ದ್ದ­ರಿಂದ ಸಿಂಗ್‌ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.

ಹಣ ಮುಟ್ಟುಗೋಲಿಗೆ ಆದೇಶ
ನವದೆಹಲಿ (ಪಿಟಿಐ):
ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕ­ತಾ­ವಾದಿ ಸಂಘಟನೆಯ ತಲೆ ಮರೆಸಿಕೊಂಡ ಭಯೋ­ತ್ಪಾದಕ ನಾಸಿರ್ ಸಫಿ ಮಿರ್‌ಗೆ ಸೇರಿದ್ದು ಎನ್ನಲಾದ ₨ 55 ಲಕ್ಷ­ಗಳನ್ನು ಮುಟ್ಟುಗೋಲು ಹಾಕಿಕೊಳ್ಳು­ವಂತೆ ಅಕ್ರಮ ಹಣ ವರ್ಗಾ­ವಣೆ ತಡೆ ವಿಶೇಷ ನ್ಯಾಯಾಲ­ಯವು ಆದೇಶಿಸಿದೆ.

ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆಯ ಅನ್ವಯ ಜಾರಿ ನಿರ್ದೇಶ­ನಾ­ಲ­ಯದ ಅಧಿಕಾರಿಗಳು ಈ ವರ್ಷದ ಆರಂಭ­ದಲ್ಲಿ 55 ಲಕ್ಷ ರೂಪಾಯಿಗಳನ್ನು ವಶ­ಪಡಿಸಿ­ಕೊಂಡಿ­ದ್ದರು.ವಿಶೇಷ ನ್ಯಾಯಾಲಯವು ಇದೇ ಮೊದಲ ಬಾರಿಗೆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ.

ಎಎಪಿಗೆ ಕಜ್ಮಿ ರಾಜೀನಾಮೆ
ನವದೆಹಲಿ (ಐಎಎನ್‌ಎಸ್‌):
ಎಎಪಿ ಕೆಲವು ಕಾರ್ಪೊರೇಟ್‌ ಕಂಪೆನಿಗ­ಳೊಂದಿಗೆ ಕೈಜೋಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಮಕ್ಸೂದ್‌ ಅಲಿ ಕಜ್ಮಿ ಆಮ್‌ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಮಂಡಳಿ ಸದಸ್ಯ ಸ್ಥಾನಕ್ಕೆ ಸೋಮವಾರ ರಾಜೀ­ನಾಮೆ ನೀಡಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ­ನಾ­­ಡಿದ ಅವರು ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್‌ ಅವರ ಮೇಲೆ ಆರೋಪ­ಗಳ ಸುರಿಮಳೆ ಗರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT