ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಿನ ಪಾತ್ರದಲ್ಲಿ ಆಮಿ

ಪಂಚರಂಗಿ
Last Updated 29 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

‘ಏಕ್‌ ದಿವಾನಾ ಥಾ’ ಎಂಬ ರೊಮ್ಯಾಂಟಿಕ್‌ ಸಿನಿಮಾದ ಮೂಲಕ ಬಾಲಿವುಡ್‌ ತೀರದಲ್ಲಿ ತಮ್ಮ ಮೊದಲ ಹೆಜ್ಜೆ ಗುರುತು ಮೂಡಿಸಿದರೂ ನಟಿ ಆಮಿ ಜಾಕ್ಸನ್‌ ಅವರಿಗೆ ತುಂಬ ಖುಷಿಕೊಟ್ಟದ್ದು ‘ಸಿಂಗ್‌ ಈಸ್‌ ಬ್ಲಿಂಗ್‌’ ಸಿನಿಮಾದ ಪಾತ್ರ.

‘‘ಸಿಂಗ್‌ ಇಸ್‌ ಬ್ಲಿಂಗ್‌’ ಚಿತ್ರದಲ್ಲಿನ ಬ್ರಿಟಿಶ್‌ ರೂಪದರ್ಶಿಯ ಪಾತ್ರವು ನನ್ನ ವೃತ್ತಿಬದುಕಿನಲ್ಲಿ ದೊರೆತ ದೊಡ್ಡ ಅವಕಾಶ’ ಎಂದೂ ಅವರು ಹೇಳಿದ್ದಾರೆ.

‘‘ನನಗೆ ಸಾಹಸ ಪ್ರಧಾನ ಪಾತ್ರದಲ್ಲಿ ನಟಿಸಬೇಕು ಎಂಬ ಆಸೆಯಿತ್ತು. ಯಾಕೆಂದರೆ ಬಾಲಿವುಡ್‌ನ ಹಲವಾರು ನಟಿಯರು ಅಂತಹ ಪಾತ್ರಗಳನ್ನು ಮಾಡುವುದಿಲ್ಲ. ‘ಸಿಂಗ್‌ ಈಸ್‌ ಬ್ಲಿಂಗ್‌’ ಚಿತ್ರದಲ್ಲಿ ನನ್ನ ಕನಸಿನ ಪಾತ್ರದಲ್ಲಿ ನಟಿಸುವ ಅವಕಾಶ ದೊರೆತಿದೆ’’ ಎಂದು ದೆಹಲಿಯಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.

23 ವರ್ಷದ ಈ ಬೆಡಗಿ ಬರೀ ಸಾಹಸಪ್ರಧಾನ ಪಾತ್ರಗಳಿಗೆ ಅಂಟಿಕೊಂಡಿರಲೂ ಬಯಸುವುದಿಲ್ಲ. ಯಾಕೆಂದರೆ ಭಾರತೀಯ ಸಿನಿಮಾಗಳಲ್ಲಿ ಹಾಡು ಮತ್ತು ನೃತ್ಯಗಳಿಗೆ ಇರುವ ಮಹತ್ವವನ್ನು ಅವರು ಚೆನ್ನಾಗಿಯೇ ಅರಿತುಕೊಂಡಿದ್ದಾರೆ.

‘ಸಾಹಸ ಪ್ರಧಾನ ಪಾತ್ರಗಳೆಂದರೆ ನನಗೆ ಇಷ್ಟ. ಅಂತಹ ಪಾತ್ರಗಳಲ್ಲಿ ನಟಿಸುವುದನ್ನು ಮುಂದುವರಿಸುತ್ತೇನೆ. ಆದರೆ ಅದೇ ಸಮಯದಲ್ಲಿ ಹಾಡು ಮತ್ತು ನೃತ್ಯಗಳು ಬಾಲಿವುಡ್‌ ಸಿನಿಮಾಗಳಲ್ಲಿ ಎಷ್ಟು ಮಹತ್ವದ ಪಾತ್ರ ವಹಿಸುತ್ತವೆ ಎಂಬ ಅರಿವೂ ನನಗಿದೆ. ಆದ್ದರಿಂದ ಆ ವಿಭಾಗಗಳಲ್ಲಿಯೂ ಪರಿಣತಿ ಸಾಧಿಸುವುದು ನನ್ನ ಮೊದಲ ಆದ್ಯತೆ’ ಎಂದೂ ಅವರು ಹೇಳಿದ್ದಾರೆ.

ಪ್ರಭುದೇವ್‌ ನಿರ್ದೇಶನದ ‘ಸಿಂಗ್‌ ಈಸ್‌ ಬ್ಲಿಂಗ್‌’ ಸಿನಿಮಾದಲ್ಲಿ ಅಕ್ಷಯ್‌ ಕುಮಾರ್‌ ಅವರೊಂದಿಗೆ ನಟಿಸುತ್ತಿರುವ ಆಮಿ ಅವರಿಗೆ ಮುಂದೆಯೂ ಅಕ್ಷಯ್‌ ಜತೆ ಕೆಲಸ ಮಾಡುವ ಆಸೆ  ಇದೆ.

‘ಅಕ್ಷಯ್‌ ಅತ್ಯುತ್ತಮ ಸಹಕಲಾವಿದ. ಅವರು ಕೆಲಸದ ಬಗ್ಗೆ ಎಷ್ಟು ಗಂಭೀರವಾಗಿರುತ್ತಾರೆಯೋ ಅವರೊಂದಿಗೆ ಕೆಲಸ ಮಾಡುವುದು ಅಷ್ಟೇ ಮೋಜಿನಿಂದಲೂ ಕೂಡಿರುತ್ತದೆ. ಭವಿಷ್ಯದಲ್ಲಿಯೂ ಅವರೊಂದಿಗೆ ಕೆಲಸ ಮಾಡುವ ಆಸೆ ಇದೆ. ಈ ಚಿತ್ರದ ನಟನೆ ಮತ್ತು ಸಾಹಸ ದೃಶ್ಯಗಳಲ್ಲಿ ಅವರು ನನಗೆ ತುಂಬಾ ಸಹಾಯ ಮಾಡಿದ್ದಾರೆ’ ಎಂದು ಅವರು ಕೃತಜ್ಞತೆ ಸಲ್ಲಿಸುತ್ತಾರೆ.

ಈ ವಾರ ತೆರೆಕಾಣಲಿರುವ ‘ಸಿಂಗ್‌ ಈಸ್‌ ಬ್ಲಿಂಗ್‌’ ಚಿತ್ರದಲ್ಲಿ ಲಾರಾ ದತ್ತ ಕೂಡ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT