ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಮೊಳಿ, ದಯಾಳು ಅಮ್ಮಾಳ್‌ ಭಾಗಿ

Last Updated 20 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  2ಜಿ ಹಗರಣ­ದಲ್ಲಿ ಲಂಚವಾಗಿ ಪಡೆದ ಹಣವನ್ನು ಸಂಗ್ರಹಿಸು-­ವಲ್ಲಿ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರ ಪತ್ನಿ ದಯಾಳು ಅಮ್ಮಾಳ್‌ ಅವರ ಪಾತ್ರವಿದೆ. ಹೀಗೆ ಸಂಗ್ರಹವಾದ ಹಣವನ್ನು ಅವರ ಪುತ್ರಿ ಕನಿಮೊಳಿ ಕಲೈಂಗಾರ್‌ ಟಿವಿಯಲ್ಲಿ ತೊಡಗಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯವು 2ಜಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.

 2ಜಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ಚಲಾವಣೆ ಪ್ರಕರಣದಲ್ಲಿ ಪ್ರಾಸಿ­ಕ್ಯೂಷನ್‌ ಸಾಕ್ಷಿಯಾಗಿ ಹಾಜರಾದ ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ಹಿಮಾಂಶು ಕುಮಾರ್‌ ಲಾಲ್, ದಯಾಳು ಅಮ್ಮಾಳ್‌ ಮತ್ತು ರಾಜ್ಯಸಭಾ ಸದಸ್ಯೆ ಕನಿಮೊಳಿ ವಿರುದ್ಧ ಆರೋಪ ಮಾಡಿದರು.

ದಯಾಳು ಅಮ್ಮಾಳ್‌ ಮತ್ತು ಕನಿಮೊಳಿ  ಅವರು ಕಲೈಂಗಾರ್‌ ಟಿವಿಯಲ್ಲಿನ ಷೇರುಗಳ ಮೂಲಕ ಭ್ರಷ್ಟಾಚಾರದ ಮೂಲಕ ಸಂಗ್ರಹಿಸಲಾದ ಹಣವನ್ನು ಬಿಳಿ ಹಣದಂತೆ ತೋರಿಸಿದ್ದಾರೆ. ಲಂಚದ ಹಣವನ್ನು ‘ಸಿನೆಯುಗ್‌ ಫಿಲ್ಮ್ಸ್‌ ಮೂಲಕ ಕಲೈಂಗಾರ್‌ ಟಿವಿಗೆ ವರ್ಗಾಯಿಸಲಾಗಿದೆ. ಆನಂತರ ಕಲೈಂಗಾರ್‌ ಟಿವಿ ಮೂಲಕ ಮತ್ತೆ ಸಿನೆಯುಗ್‌ ಫಿಲ್ಮ್ಸ್‌ನಲ್ಲಿ ಹಣ ತೊಡಗಿಸಲಾಗಿದೆ ಎಂದು ಹಿಮಾಂಶು ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT