ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಅಂಕಿ ಬಳಸಿ

ಅಕ್ಷರ ಗಾತ್ರ

ಇಂಗ್ಲಿಷ್‌ ಅಂಕಿಗಳ ಅಟಾಟೋಪದಲ್ಲಿ ನಮ್ಮ ಕನ್ನಡ ಅಂಕಿಗಳು ನೇಪಥ್ಯಕ್ಕೆ ಸರಿಯುತ್ತಿವೆ. ಸರ್ಕಾರಿ ಕಚೇರಿಗಳಲ್ಲಿ, ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ಕನ್ನಡ ಅಂಕಿಗಳ ಬಳಕೆ ಇಲ್ಲವೆನ್ನುವಷ್ಟರ ಮಟ್ಟಿಗೆ ನಿಂತುಹೋಗಿದೆ. ಕನ್ನಡ ಮಾಹಿತಿ ಪುಸ್ತಕಗಳಲ್ಲಿಯೂ ಇಂಗ್ಲಿಷ್‌ ಅಂಕಿಗಳೇ ಬಳಕೆಯಾಗುತ್ತಿವೆ. ಹೀಗೇ ಮುಂದುವರಿದರೆ ನಮ್ಮ ಮುಂದಿನ ಪೀಳಿಗೆಗೆ ಕನ್ನಡ ಅಂಕಿಗಳು ಅಪರಿಚಿತವಾಗುತ್ತವೆ.

ನೆರೆಯ ಮಹಾರಾಷ್ಟ್ರ ನಮಗೆ ಈ ವಿಷಯದಲ್ಲಿ ಮಾದರಿಯಾಗಬೇಕು. ಸರ್ಕಾರದ ಎಲ್ಲ ಕಚೇರಿಗಳಲ್ಲಿ ಹಾಗೂ ದಿನನಿತ್ಯದ ವ್ಯವಹಾರದಲ್ಲಿ ಮರಾಠಿ ಅಂಕಿಗಳನ್ನೇ ಬಳಸಲಾಗುತ್ತಿದೆ. ಅವರ ಬಸ್‌ ಟಿಕೆಟ್‌ಗಳಲ್ಲಿಯೂ ಮರಾಠಿ ಅಂಕಿಗಳು! ಮರಾಠಿಯ ಎಲ್ಲ ಪತ್ರಿಕೆಗಳು ತಮ್ಮ ಅಂಕಿಗಳನ್ನು ಬಳಸುತ್ತವೆ.

ಕನ್ನಡ ಅಂಕಿಗಳನ್ನು ಉಳಿಸಿ ಬೆಳೆಸುವ   ದಿಸೆಯಲ್ಲಿ ನಾವೂ ಸರ್ಕಾರಿ ಕಚೇರಿಗಳಿಂದ ಹಿಡಿದು ವೈಯಕ್ತಿಕ ಬದುಕಿನ ಎಲ್ಲ ಹಂತಗಳಲ್ಲಿ ಕನ್ನಡ ಅಂಕಿಗಳನ್ನು ಬಳಕೆಗೆ ತರಬೇಕಿದೆ. ಮಕ್ಕಳಿಗೆ ಅಂಗನವಾಡಿ ಮತ್ತು ಪ್ರಾಥಮಿಕ ಹಂತದಲ್ಲಿ ಆಂಗ್ಲ ಅಂಕಿಗಳಿಗೂ ಮೊದಲು ಕನ್ನಡ ಅಂಕಿಗಳನ್ನು ಕಲಿಸಬೇಕು. 

ಕನ್ನಡಿಗರು ಮೊಬೈಲ್‌ ಅಂಕಿಗಳನ್ನು ಹೇಳುವಾಗ ಮತ್ತು ಕೇಳುವಾಗ ಮುತುವರ್ಜಿ ವಹಿಸಿ ಕನ್ನಡ ಬಳಸಬೇಕು! ಪ್ರೀತಿ, ಅಭಿಮಾನವೊಂದಿದ್ದರೆ ಎಲ್ಲವೂ ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT