ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕಪ್ಪು­ಹಣ­ದಲ್ಲಿ ನಯಾಪೈಸೆ ಬಿಡದೆ ವಾಪಸ್‌'

‘ಮನದ ಮಾತು’ ಬಾನುಲಿ ಕಾರ್ಯಕ್ರಮದಲ್ಲಿ
Last Updated 2 ನವೆಂಬರ್ 2014, 20:27 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿದೇಶಿ ಬ್ಯಾಂಕು­­ಗ­ಳಲ್ಲಿ ಭಾರತೀಯರು ಇರಿಸಿ­ರುವ ಕಪ್ಪು­ಹಣ­ದಲ್ಲಿ ನಯಾಪೈಸೆ­ಯನ್ನೂ ಬಿಡದೆ ವಾಪಸ್‌ ತರಲಾ­ಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ.

ಭಾರತೀಯರು ವಿದೇಶಗಳಲ್ಲಿ ಇರಿಸಿ­ರುವ ಕಪ್ಪುಹಣದ ಮೊತ್ತ ಎಷ್ಟು ಎಂಬ ಬಗೆ ಸರಿಯಾದ ಅಂದಾಜು ಇಲ್ಲ. ಅದೇನೇ ಇದ್ದರೂ

ಕಪ್ಪು ಹಣಕ್ಕೆ ಸಂಬಂಧಿಸಿ ಈ ‘ಪ್ರಧಾನ ಸೇವಕ’ನ ಮೇಲೆ ನಂಬಿಕೆ ಇರಲಿ. ಈ ದೇಶದಿಂದ ಹೊರ­ಹೋಗಿ­­­ರುವ ಬಡವರ ಪ್ರತಿ­ಯೊಂದು ಪೈಸೆಯೂ ವಾಪಸ್‌ ಬರಲೇಬೇಕು ಎಂಬುದಕ್ಕೆ  ಬದ್ಧ­ವಾಗಿದ್ದೇನೆ  – ನರೇಂದ್ರ ಮೋದಿ

ಸರ್ಕಾರವು ಕಪ್ಪುಹಣ­ವನ್ನು ವಾಪಸ್‌ ತರಲು ‘ಸರಿಯಾದ ದಿಕ್ಕಿನಲ್ಲೇ’ ಪ್ರಯತ್ನ ನಡೆಸುತ್ತಿದೆ ಎಂದು ಸಮರ್ಥಿಸಿಕೊಂಡರು.

ರೇಡಿಯೋದಲ್ಲಿ ತಾವು ಆರಂಭಿಸಿ­ರುವ ‘ಮನ್‌ ಕಿ ಬಾತ್‌’ (ಮನದ ಮಾತು) ಕಾರ್ಯಕ್ರಮದಲ್ಲಿ ಭಾನು­ವಾರ ಮಾತನಾಡಿದ ಅವರು, ‘ವಿದೇಶ­ಗಳಲ್ಲಿ ಇರುವ ಕಪ್ಪುಹಣ ವಾಪಸ್‌ ತರುವ ವಿಷಯವು ನನ್ನ ಪಾಲಿಗೆ ನಂಬಿ­ಕೆಯ ಕಟ್ಟಳೆಯಾಗಿದೆ. ಇದನ್ನು ಸಾಧ್ಯ­ವಾಗಿಸಲು ಯಾವ ಲೋಪವೂ ಇಲ್ಲ­ದಂತೆ ಪರಿಶ್ರಮ ಹಾಕುತ್ತೇನೆ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT