ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಹಣ: ಎಸ್‌ಐಟಿ ರಚನೆಗೆ ಗಡುವು

Last Updated 23 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಪ್ಪು ಹಣ ಪ್ರಕ­ರಣಗಳನ್ನು ತನಿಖೆ ಮಾಡಲು ನಿವೃತ್ತ ನ್ಯಾಯಮೂರ್ತಿ ಎಂ.ಬಿ. ಷಾ ನೇತೃತ್ವ­ದಲ್ಲಿ ರಚಿಸಲಾಗಿರುವ ಸಮಿತಿಗೆ ನೆರವಾಗಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಸುಪ್ರೀಂ­ಕೋರ್ಟ್ ಕೇಂದ್ರ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದೆ.

ನ್ಯಾಯಮೂರ್ತಿ ಬಿ.ಎಸ್. ಚವಾಣ್ ಮತ್ತು ಎ.ಕೆ. ಸಿಕ್ರಿ ಅವರನ್ನು ಒಳಗೊಂಡ ರಜಾ ಕಾಲದ ನ್ಯಾಯಪೀಠವು ವಿಶೇಷ ತನಿಖಾ ತಂಡ ರಚನೆಗೆ ನೀಡಿದ್ದ ಅವಧಿ­ಯನ್ನು ಮತ್ತೊಂದು ವಾರ ವಿಸ್ತರಿಸಿದೆ. ಈ ಮೊದಲು ನೀಡಿದ್ದ ಅವಧಿಯು ಗುರುವಾರ ಕೊನೆಗೊಂಡಿದೆ.

ಶಾಸ್ತ್ರಿ ಭವನದಲ್ಲಿ ಇಡಲಾಗಿರುವ ಕಪ್ಪು ಹಣ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ದಾಖಲೆಗಳನ್ನು ನಾಶ­ಪಡಿಸಲಾಗಿದೆ ಎಂದು ಅರ್ಜಿದಾರ ಹಿರಿಯ ವಕೀಲ ರಾಂ ಜೇಠ್ಮಲಾನಿ ದೂರಿ­ದ್ದ­ರಿಂದ ಎಲ್ಲ ದಾಖಲೆಗಳನ್ನು ಕಂದಾಯ ಇಲಾಖೆಯ ಕಾರ್ಯದರ್ಶಿ ಮಟ್ಟದ ಅಧಿಕಾರಿಯು ಸುರಕ್ಷಿತವಾಗಿ ಇಡಬೇಕು ಎಂದು ನ್ಯಾಯಪೀಠ ಆದೇಶಿಸಿತು.

ಆದರೆ ಸಾಲಿಸಿಟರ್‌ ಜನರಲ್‌ ಮೋಹನ್‌ ಪರಾಶರನ್‌ ಅವರು ಜೇಠ್ಮ­ಲಾನಿ ಆರೋಪವನ್ನು ತಳ್ಳಿಹಾಕಿ­ದರು. ದಾಖಲೆಗಳು ಶಾಸ್ತ್ರಿ ಭವನಲ್ಲಿ ಇಲ್ಲ, ಅವುಗಳನ್ನು ನಾರ್ಥ್ ಬ್ಲಾಕ್‌ನಲ್ಲಿ ಇಡ­ಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT