ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಹಣ: ಕಾನೂನು ತಿದ್ದುಪಡಿ ತನ್ನಿ

Last Updated 12 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿದೇಶದಲ್ಲಿ ಅಕ್ರಮವಾಗಿ ಹಣ ಇಟ್ಟವರು ಹಾಗೂ ₨ 50 ಲಕ್ಷಗಳಿಂತ ಹೆಚ್ಚಿನ ತೆರಿಗೆ ತಪ್ಪಿಸಿಕೊಂಡವರ ಸ್ವದೇಶದಲ್ಲಿರುವ ಆಸ್ತಿ­ಮುಟ್ಟುಗೋಲು ಹಾಕಿ­ಕೊಳ್ಳುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕಾಗಿದೆ ಎಂದು ಕಪ್ಪುಹಣಕ್ಕೆ ಸಂಬಂಧಿ­ಸಿದ ‘ವಿಶೇಷ ತನಿಖಾ ತಂಡ’ (ಸಿಟ್‌) ಹೇಳಿದೆ.

ಸುಪ್ರೀಂಕೋರ್ಟ್‌ಗೆ ಶುಕ್ರವಾರ ತನ್ನ ಎರಡನೇ ವರದಿ ಸಲ್ಲಿಸಿದ ‘ಸಿಟ್‌’ 13 ಶಿಫಾರಸುಗಳನ್ನು ಮಾಡಿದೆ. ಒಂದು ಲಕ್ಷ ರೂಪಾಯಿಗೂ ಮೇಲ್ಪಟ್ಟ ಎಲ್ಲ ನಗದು ಹಾಗೂ ಚೆಕ್‌ ವ್ಯವಹಾರ­ಗಳಲ್ಲೂ ‘ಪಾನ್‌’ ಕಾರ್ಡ್‌ ಕಡ್ಡಾಯ. ಅಕ್ರಮ ಹಣದ ವ್ಯವಹಾರವನ್ನು ತಡೆಗಟ್ಟಲು ನಗದು ಇಟ್ಟುಕೊಳ್ಳುವ ಹಾಗೂ ಸಾಗಣೆ ಮಾಡುವ ಮಿತಿಯನ್ನು 10ರಿಂದ 15 ಲಕ್ಷ ರೂಪಾಯಿ­ಗಳಿಗೆ ನಿರ್ಬಂಧಿಸುವುದು ಅವುಗಳಲ್ಲಿ ಕೆಲವು.

ಗಣಿಗಾರಿಕೆ, ಕಬ್ಬಿಣದ ಅದಿರು ರಫ್ತು, ಹಣ ಹೆಚ್ಚಿಸುವ ನಕಲಿ ಸ್ಕೀಮ್‌ಗಳು, ಬ್ಯಾಂಕಿಂಗ್‌ ವ್ಯವಸ್ಥೆಯ ಹೊರಗೆ ಬೃಹತ್‌ ಮೊತ್ತದ ಹಣ­ಕಾಸು ವ್ಯವ­ಹಾರ ನಡೆ­ಸುವ ‘ಅಂಗಾ­ಡಿಯಾ’ ವ್ಯವಸ್ಥೆ­ಯಲ್ಲಿ ಕಪ್ಪುಹಣ ಬಳಕೆಯಾ­ಗು­ತ್ತಿದೆ ಎಂಬು­ದನ್ನು  ಸಿಟ್‌ ವಿವರಿಸಿದೆ.
₨50 ಲಕ್ಷಗಳಿಂತ ಹೆಚ್ಚಿನ ತೆರಿಗೆ ವಂಚಿ­ಸು­ವುದು ಅಪ­ರಾಧವಾ­ಗಿದ್ದು, ಅಕ್ರಮ ಹಣ ಚಲಾವಣೆ ತಡೆ ಕಾಯ್ದೆ ಅನ್ವಯ (ಪಿಎಂಎಲ್‌ಎ) ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ಜರು­ಗಿಸ­ಬಹುದಾಗಿದೆ ಎಂದೂ ಸಿಟ್‌ ಹೇಳಿದೆ. ರಪ್ತು ಹಾಗೂ ಆಮದು ದತ್ತಾಂಶ­ಗಳನ್ನು ಇತರ ದೇಶ­ಗಳ ದತ್ತಾಂಶಗಳ ಜತೆ ತ್ರೈಮಾಸಿಕವಾಗಿ ಹೋಲಿಕೆ ಮಾಡಬೇಕು.

₨ 4,479 ಕೋಟಿ ಠೇವಣಿ
ಒಬ್ಬನೇ ವ್ಯಕ್ತಿ ಬೇರೆಬೇರೆ ಹೆಸರಿನಲ್ಲಿ ಹಣಕಾಸು ವ್ಯವಹಾರ ಮಾಡುವುದನ್ನು ತಪ್ಪಿಸಲು ‘ನಿಮ್ಮ ಗ್ರಾಹ­ಕರನ್ನು ಅರಿಯಿರಿ’ (ಕೆವೈಸಿ) ಎಂಬ ನೋಂದಣಿ ಪುಸ್ತಕ ನಿರ್ವಹಣೆ ಮಾಡಬೇಕು ಎಂದೂ ಸಿಟ್‌ ಅಭಿಪ್ರಾಯ­ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT