ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಹಣ: ಭಾರತದ ಕಠಿಣ ನಿಲುವು

Last Updated 30 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಭಾರತೀಯರು ಹೊಂದಿರುವ ರಹಸ್ಯ ಬ್ಯಾಂಕ್‌ ಖಾತೆಗಳ ಕುರಿತು  ಮಾಹಿತಿ ನೀಡಲು ಹಿಂದೇಟು ಹಾಕುವ ಮೂಲಕ ಸ್ವಿಟ್ಜರ್ಲೆಂಡ್‌ ಸರ್ಕಾರ ಮತ್ತೆ  ಅಸಹಕಾರ ಧೋರಣೆ ತಳೆದಿದೆ.  ಸ್ವಿಟ್ಜರ್ಲೆಂಡ್‌ನ ಈ ನಿಲುವಿನ ವಿರುದ್ಧ ‘ಜಿ–20’ ಸೇರಿದಂತೆ ಬಹುರಾ­ಷ್ಟ್ರೀಯ ವೇದಿಕೆಗಳಿಗೆ ದೂರು ನೀಡಬೇ­ಕಾಗುತ್ತದೆ ಎಂದು ಭಾರತ ಎಚ್ಚರಿಸಿದೆ.

ವ್ಯತಿರಿಕ್ತ ನಿಲುವು: ಕಪ್ಪು ಹಣದ ಸ್ವರ್ಗ ಎಂದೇ ವಿಶ್ವದಾದ್ಯಂತ ಕುಖ್ಯಾತಿಗೆ ಪಾತ್ರವಾಗಿ­ರುವ ತನ್ನ ಬ್ಯಾಂಕ್‌ಗಳಲ್ಲಿನ  ಠೇವಣಿ­ಗಳ ಬಗ್ಗೆ ದೀರ್ಘಕಾಲದವರೆಗೆ ಕಾಪಾಡಿ­ಕೊಂಡು ಬಂದಿರುವ ಗೋಪ್ಯತೆ ಬಹಿ­ರಂಗಪಡಿ­ಸಲು ಮತ್ತು ಸಂಬಂಧಿತ ದೇಶ­ಗಳ ಜತೆ ಖಾತೆಗಳ ವಿವರ  ಹಂಚಿ­ಕೊಳ್ಳಲು ಸ್ವಿಟ್ಜರ್ಲೆಂಡ್್ ಸರ್ಕಾರ ಇತ್ತೀಚೆಗಷ್ಟೇ ನಿರ್ಧರಿಸಿತ್ತ. ಈಗ ಅದಕ್ಕೆ ವ್ಯತಿರಿಕ್ತ ನಿಲುವು ತಳೆದಿದೆ.

ಭಾರತೀಯರು ಸ್ವಿಟ್ಜರ್ಲೆಂಡ್‌ನ ವಿವಿಧ ಬ್ಯಾಂಕ್‌ಗಳಲ್ಲಿ ಇರಿಸಿರುವ ಕಪ್ಪು ಹಣದ ಠೇವಣಿಗಳ ಬಗ್ಗೆ ಮಾಹಿತಿ ಹಂಚಿ­ಕೊಳ್ಳಲು 2009ರಲ್ಲಿಯೇ ಕೈಗೊಂಡ ನಿರ್ಧಾರ ಮತ್ತು ಬ್ಯಾಂಕ್‌ ಖಾತೆ­ಗಳ ರಹಸ್ಯ ಕಾಯ್ದುಕೊ­ಳ್ಳುವು­ದನ್ನು ಕೈಬಿಟ್ಟಿರುವುದಾಗಿ ಹೇಳಿದ್ದನ್ನು  ಹಣ­ಕಾಸು ಸಚಿವ ಪಿ. ಚಿದಂಬರಂ ಅವರು  ಸ್ವಿಟ್ಜರ್ಲೆಂಡ್‌ಗೆ ಪತ್ರ ಬರೆದು ನೆನಪಿಸಿದ್ದಾರೆ.

ಭಾರತ ಕೇಳಿದ್ದ ಮಾಹಿತಿಗೆ ಸಂಬಂಧಿ­ಸಿ­ದಂತೆ ಒಟ್ಟು 562 ಪ್ರಕರಣಗಳಲ್ಲಿ ಸ್ವಿಟ್ಜರ್ಲೆಂಡ್ ಭಾರತದ ಮನವಿ ತಳ್ಳಿ ಹಾಕಿದೆ. ಸ್ವಿಟ್ಜರ್ಲೆಂಡ್‌ನ ಎಚ್ಎಸ್‌­ಬಿಸಿ ಯಲ್ಲಿ ಖಾತೆ ಹೊಂದಿರುವ 782 ಮಂದಿ ಭಾರತೀಯರ ಹೆಸರುಗಳ ವಿವರವು ಭಾರತ ಸರ್ಕಾರದ ಬಳಿ ಇದೆ.

ಸಂಸದರ ಮನವೊಲಿಕೆ: ಅಂತರ­ರಾಷ್ಟ್ರೀಯ­ವಾಗಿ ಸ್ವೀಕಾರ್ಹ­ವಾದ ನಿಯಮ­­ಗಳನ್ನು ಪಾಲಿಸಲು ಸ್ವಿಟ್ಜ­ರ್ಲೆಂಡ್‌ ಸರ್ಕಾರವು ತನ್ನ ಸಂಸತ್ ಸದ­ಸ್ಯರ ಮನವೊಲಿಸಬೇಕಾಗಿದೆ.    ಭಾರತದ ಮುಂದಿರುವ ಮಾರ್ಗ: ಸ್ವಿಟ್ಜರ್ಲೆಂಡ್‌ವನ್ನು ‘ಅಸಹಕಾರ ದೇಶ' ಎಂದು ಭಾರತ ಘೋಷಿಸಬ­ಹುದು. ಸ್ವಿಟ್ಜರ್ಲೆಂಡ್‌ನಲ್ಲಿ ಇರುವ ಠೇವಣಿಗಳ ಮೇಲೆ ಗರಿಷ್ಠ ಪ್ರಮಾಣದ ತೆರಿಗೆ ವಿಧಿಸಬಹುದಾಗಿದೆ. ದುಪ್ಪಟ್ಟು ತೆರಿಗೆ ತಪ್ಪಿಸುವ ಒಪ್ಪಂದದಡಿ ದೊರೆಯುವ ಲಾಭಗಳಿಗೆ ಕತ್ತರಿ ಹಾಕಬಹುದು. 

‘ಜಿ-20' ನಿರ್ಣಯ:  2009ರಲ್ಲಿ ನಡೆದ ಜಿ–20 ರಾಷ್ಟ್ರಗಳ ಸಭೆಯಲ್ಲಿ ಕೈಗೊ­ಳ್ಳಲಾದ ನಿರ್ಣಯದಂತೆ, ಬ್ಯಾಂಕ್‌ ಖಾತೆಗಳ ಮಾಹಿತಿ ನೀಡದೆ ಇದ್ದರೆ ಅಂತಹ ರಾಷ್ಟ್ರದ ಮೇಲೆ  ನಿರ್ಬಂಧ­ಗಳನ್ನು ಹೇರಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT