ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಹಣ: ಶೀಘ್ರ ವಿಶೇಷ ತನಿಖಾ ತಂಡ ರಚನೆ

Last Updated 25 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಅಕ್ರಮ ಹಣ ಮತ್ತು ವಿದೇಶದಲ್ಲಿರುವ ಭಾರತದ ಕಪ್ಪು ಹಣದ ವಿಚಾರಣೆಗೆ ಸಂಬಂಧಪಟ್ಟ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಕೇಂದ್ರ ಸರ್ಕಾರ ಸದ್ಯದಲ್ಲೇ ರಚಿಸಲಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯ­ಮೂರ್ತಿ ಎಂ.ಬಿ.ಷಾ ಅವರು ನೂತನ ಎಸ್‌ಐಟಿಯ ಅಧ್ಯಕ್ಷರಾಗಲಿದ್ದು, ನಿವೃತ್ತ ನ್ಯಾ. ಅರಿಜಿತ್‌ ಪಸಾಯತ್‌ ಎಸ್‌ಐಟಿ ಉಪಾಧ್ಯಕ್ಷರಾಗಿ ಇರುತ್ತಾರೆ.

ದೇಶದ ಹತ್ತು ತನಿಖಾ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಈ ಕಾರ್ಯಾ­ಚರಣೆಯ ತಂಡದ ಸದಸ್ಯರಾಗಿರುತ್ತಾರೆ.
ವಿದೇಶದಲ್ಲಿ ಬಚ್ಚಿಡಲಾಗಿರುವ ಕಪ್ಪು ಹಣ ಮತ್ತು ಅಕ್ರಮ ಹಣಕ್ಕೆ ಸಂಬಂಧಿ­ಸಿದ ಎಲ್ಲಾ ಬಗೆಯ ಮೊಕದ್ದಮೆಗಳು ಎಸ್‌ಐಟಿಯ ವ್ಯಾಪ್ತಿಗೆ ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT