ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯ ನಿಭಾಯಿಸಿರುವೆ: ಸಿಂಗ್‌

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮತ್ತು 2ಜಿ ತರಂಗಾಂತರ ಹಂಚಿಕೆ ಹಗರಣ ಕುರಿತಂತೆ ನಿವೃತ್ತ ಮಹಾಲೇಖಪಾಲ (ಸಿಎಜಿ) ವಿನೋದ್‌ ರಾಯ್‌ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿ­ರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ‘ನಾನು ನನ್ನ ಕರ್ತವ್ಯ ನಿಭಾಯಿ­ಸಿ­ದ್ದೇನೆ’ ಎಂದು ಭಾನುವಾರ ಹೇಳಿದರು.

‘ಬೇರೆಯವರು ಬರೆದಿರುವ ವಿಷಯ­ಗಳ ಬಗ್ಗೆ ಪ್ರತಿಕ್ರಿಯಿಸಲಾರೆ ಆದರೆ, ನನ್ನ ಕರ್ತವ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದ್ದೇನೆ’ ಎಂದರು.

ತಮ್ಮ ಪುತ್ರಿ ದಮನ್‌ ಸಿಂಗ್‌ ಬರೆದಿ­ರುವ ‘ಸ್ಟ್ರಿಕ್ಟ್‌ಲಿ ಪರ್ಸನಲ್‌: ಮನ­ಮೋಹನ್‌ ಮತ್ತು ಗುರುಶರಣ್‌’ ಪುಸ್ತಕ ಬಿಡುಗಡೆ ಸಮಾರಂಭದ ಸಂದರ್ಭದಲ್ಲಿ ಅವರು ಸುದ್ದಿಗಾರ­ರೊಂದಿಗೆ ಮಾತ ನಾಡಿದರು.

2ಜಿ ತರಂಗಾಂತರ ಹಂಚಿಕೆ ಮತ್ತು ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ­ಗಳಿಗೆ ಆಗಿನ ಪ್ರಧಾನಿ ಸಿಂಗ್‌ ಅವರು ಕಾರಣ ಎಂದು ರಾಯ್‌ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT