ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ತಂಡಕ್ಕೆ ಜಯ

Last Updated 4 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭರವಸೆಯ ಆಟಗಾರ್ತಿ ಬಾಂಧವ್ಯ ಮಹೇಶ್‌ (32 ಪಾಯಿಂಟ್ಸ್‌) ಅವರ ಅಪೂರ್ವ ಆಟದ ಸಹಾಯದಿಂದ ಕರ್ನಾಟಕ ಬಾಲಕಿಯರ ತಂಡದವರು ಪಂಜಾಬ್‌ನ ಲೂಧಿಯಾನದಲ್ಲಿ ನಡೆಯುತ್ತಿರುವ 66ನೇ ರಾಷ್ಟ್ರೀಯ ಜೂನಿಯರ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ.

ಭಾನುವಾರ ನಡೆದ ‘ಎ’ ಗುಂಪಿನ ಎರಡನೇ ಪಂದ್ಯದಲ್ಲಿ ರಾಜ್ಯ ತಂಡ 78–32 ಪಾಯಿಂಟ್ಸ್‌ಗಳಿಂದ ಮಧ್ಯಪ್ರದೇಶ ತಂಡವನ್ನು ಪರಾಭವಗೊಳಿಸಿತು. ಮೊದಲ ಪಂದ್ಯದಲ್ಲಿ ರಾಜ್ಯ ತಂಡ 61–40 ಪಾಯಿಂಟ್ಸ್‌ಗಳಿಂದ ಆತಿಥೇಯ ಪಂಜಾಬ್‌ ತಂಡದ ಎದುರು ಗೆದ್ದಿತ್ತು. ಬಾಲಕರ ತಂಡಕ್ಕೆ ನಿರಾಸೆ: ಶನಿವಾರ ನಡೆದ ಬಾಲಕರ ‘ಎ’ ಗುಂಪಿನ ಪಂದ್ಯ ದಲ್ಲಿ ಕರ್ನಾಟಕ 83–86ರಲ್ಲಿ ಮಹಾ ರಾಷ್ಟ್ರ ಎದುರು ಸೋಲು ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT