ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಭೂ ಕಂದಾಯ ಮಸೂದೆಗೆ ಮೇಲ್ಮನೆ ಅನುಮೋದನೆ

Last Updated 30 ಜುಲೈ 2014, 20:27 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆ–2014’ನ್ನು ವಿಧಾನಪರಿಷತ್ತಿನಲ್ಲಿ ಬುಧ­ವಾರ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಕಂದಾಯ ಸಚಿವ ವಿ.ಶ್ರೀನಿವಾಸ್‌ ಪ್ರಸಾದ್‌ ಅವರು ಅಧಿವೇಶನದ ಕೊನೆ ದಿನ ಮಸೂ­ದೆ­ಯನ್ನು  ಮಂಡಿಸಿದರು. ಮಸೂದೆಯ ಕುರಿತಾಗಿ ಮಾತ­ನಾಡಿದ ವಿರೋಧ ಪಕ್ಷದ ನಾಯಕ ಕೆ.ಎಸ್‌.­ಈಶ್ವರಪ್ಪ, ‘ಮಸೂದೆಗೆ ತಿದ್ದು­ಪಡಿ ತರು­ತ್ತಿ­ರುವುದು ಸ್ವಾಗ­ತಾರ್ಹ. ಆದರೆ, ಬಾಕಿ ಉಳಿದಿರುವ 224 ಕ್ಷೇತ್ರಗಳಿಗೆ ಶೀಘ್ರ­ದಲ್ಲಿ ಬಗರ್‌ಹುಕುಂ ಸಮಿ­ತಿ­ಗಳನ್ನು ರಚಿಸ­ಬೇಕು’ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವರು, ‘ಶೀಘ್ರದಲ್ಲಿ ಸಮಿತಿಗಳನ್ನು ರಚಿಸ­ಲಾ­­ಗುವುದು. ಬೆಳಗಾವಿ ಅಧಿ­ವೇಶನದ ವೇಳೆಗೆ ಎಲ್ಲ ಸಮಿತಿಗಳು ಕಾರ್ಯಾರಂಭ ಮಾಡಲಿವೆ’ ಎಂದರು.

ಖಾಸಗಿ ಸದಸ್ಯರ ಮಸೂದೆ ಮಂಡನೆ:  ಬಿಜೆಪಿಯ ಸಿ.ಎಚ್‌. ವಿಜಯಶಂಕರ್‌ ಅವರು ‘ಕರ್ನಾ­ಟಕ ಭೂ ಕಂದಾಯ ಕಾಯ್ದೆ– 1964ಕ್ಕೆ ಇನ್ನಷ್ಟು ತಿದ್ದುಪಡಿ  ತರುವುದಕ್ಕಾಗಿ ಖಾಸಗಿ ಮಸೂದೆ­ಯನ್ನು ಮೇಲ್ಮನೆಯಲ್ಲಿ ಮಂಡಿಸಿದರು. ಬೆಳ­ಗಾವಿಯಲ್ಲಿ ನಡೆ­ಯ­ಲಿ­ರುವ ಅಧಿವೇಶನದಲ್ಲಿ ಈ ಮಸೂದೆ ಕುರಿತ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಭಾಪತಿ ಡಿ.ಎಚ್‌. ಶಂಕರ­ಮೂರ್ತಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT