ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಪ ಭಂಗಕ್ಕೆ ಪ್ರಧಾನಿ ಕಾರಣ

ಸಚಿವರ ವಿರುದ್ಧ ಕ್ರಮಕ್ಕೆ ನಿರಾಕರಣೆ: ಯೆಚೂರಿ ಆರೋಪ
Last Updated 25 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮತಾಂತರ ಕುರಿತಂತೆ ಪ್ರಚೋದನಾಕಾರಿ ಹೇಳಿಕೆ­ಗಳನ್ನು ನೀಡಿದ ಸಚಿವರು ಮತ್ತು ಸಂಸದರ ವಿರುದ್ಧ ಸೂಕ್ತ ಕ್ರಮಕೈಗೊ­ಳ್ಳುವ ಭರವಸೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ನಿರಾಕರಿ­ಸಿದ್ದೇ ರಾಜ್ಯ ಸಭೆಯ ಕಲಾಪಗಳಿಗೆ ಅಡ್ಡಿಯುಂಟಾಗಲು ಕಾರಣ ಎಂದು ಸಿಪಿಐ (ಎಂ) ಆರೋಪಿಸಿದೆ.

ಸಾಂವಿಧಾನಿಕ ಹೊಣೆ ಮತ್ತು ಭಾರತೀಯ ದಂಡ ಸಂಹಿತೆಯನ್ನು ಉಲ್ಲಂಘಿಸಿದವರನ್ನು, ಅದರಲ್ಲೂ ಬಿಜೆಪಿಯ ಸಚಿವರು ಮತ್ತು ಸಂಸದ­ರನ್ನು ಅವರ ಅಪರಾಧಕ್ಕಾಗಿ ಶಿಕ್ಷಿಸಬೇಕು ಎಂದು ಪಕ್ಷದ ಹಿರಿಯ ಮುಖಂಡ ಸೀತಾರಾಂ ಯೆಚೂರಿ ಒತ್ತಾಯಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಲು ಪ್ರಧಾನಿ ನಿರಾಕರಿಸಿದರು. ಇದೇ ರಾಜ್ಯ ಸಭೆಯ ಕಲಾಪ ಭಂಗಗೊಳ್ಳಲು ಕಾರಣ ಎಂದು ಅವರು ವಿಶ್ಲೇಷಿಸಿದರು.

‘ಈ ಗಲಭೆಗಳಿಗೆ ಪ್ರಚೋದನೆ ನೀಡುವ ಮೂಲಕ ಗುಪ್ತ ಹಿಂದುತ್ವ ಕಾರ್ಯಸೂಚಿ ಈಡೇರಿಸಿ­ಕೊಳ್ಳಲು ಪ್ರಯತ್ನಿಸುತ್ತಿರುವ ಸಂಸ­ದರು, ಸಚಿ­ವರು ಮತ್ತು ವಕ್ತಾರರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ. ಇದಕ್ಕೆ ವಿರೋಧ ಪಕ್ಷ­ಗ­ಳನ್ನು ದೂರುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT