ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಸುವ ಬಗೆ ಬದಲಾಗಲಿ

Last Updated 25 ಜನವರಿ 2015, 19:30 IST
ಅಕ್ಷರ ಗಾತ್ರ

ಭಾಷೆ ಕಲಿಕೆ ಬಿಕ್ಕಟ್ಟು (ಅಂತರಾಳ ಪ್ರ.ವಾ. ಜ.24). ಶಾಲೆಯಲ್ಲಿ ಮಗು­ವಿಗೆ ಇಂಗ್ಲಿಷ್‌  ಭಾಷೆ­ಯನ್ನು ಕಲಿ­ಸು­ವಾಗ ಮೊದಲ ಹಂತದಲ್ಲಿ ಇಂಗ್ಲಿಷ್‌  ಭಾಷೆಯ ಚಿಕ್ಕ ಚಿಕ್ಕ ವಾಕ್ಯಗಳನ್ನು ಮಾತುಕತೆಯ ರೂಪ­ದಲ್ಲಿ ಮಗುವಿನ ಮುಂದೆ ಉಚ್ಚರಿ­ಸುತ್ತಾ, ಮಗು ಅದನ್ನು ಕೇಳಿ, ಅದರ ತಿರುಳನ್ನು ತಿಳಿದುಕೊಳ್ಳು­ವಂತೆ ಮಾಡ­ಬೇಕು. ಅನಂತರ ಇಂಗ್ಲಿಷ್‌   ಭಾಷೆಯ ಸಣ್ಣ­ಪುಟ್ಟ ವಾಕ್ಯ-­ಗಳನ್ನು ಮಗು ನುಡಿಯು­ವಂತೆ ತರಬೇತಿ­­ಯನ್ನು ನೀಡಬೇಕು. ಈ ಎರಡು ಹಂತ­ಗಳನ್ನು ದಾಟಿದ ನಂತರ ಇಂಗ್ಲಿಷ್‌   ಭಾಷೆಯ ಅಕ್ಷರ­ಗಳನ್ನು ಪರಿಚ­ಯಿಸಿ, ಅದರ ಪದರಚನೆ ಮತ್ತು ವಾಕ್ಯ­ರಚನೆ­ಗಳನ್ನು ಗುರುತಿಸಿ ಓದುವ ಕೌಶಲ­ ಕಲಿಸಬೇಕು. ಕೊನೆಯ ಹಂತ­ವಾಗಿ ಇಂಗ್ಲಿಷ್‌ ಭಾಷೆಯಲ್ಲಿ ಬರೆಯುವು­ದನ್ನು ಹೇಳಿಕೊಡಬೇಕು.

ಈ ರೀತಿ ಮಗುವೊಂದು ಭಾಷೆಗಳನ್ನು ತನ್ನದಾಗಿಸಿ ಕೊಳ್ಳಲು ‘ಕೇಳುವ,-ನುಡಿಯುವ,- ಓದುವ,- ಬರೆ­ಯುವ’ ಕೌಶಲಗಳನ್ನು ಹಂತಹಂತ­ವಾಗಿ ಕಲಿಯ­ಬೇಕು. ಆದರೆ ನಮ್ಮ ಶಿಕ್ಷಣ ಪದ್ಧತಿ­ಯಲ್ಲಿ ಇದು ತಲೆ­ಕೆಳಕಾಗಿದೆ. ಆದುದರಿಂದಲೇ ಹಳ್ಳಿಗಾಡಿನ ಶಾಲೆ­ಗಳಲ್ಲಿ ನಾಲ್ಕು ಗೋಡೆಗಳ ನಡುವೆ ಹೇಳಿ­ಕೊಡುವ ಅನ್ಯ ಭಾಷೆಯಾದ ಇಂಗ್ಲಿಷ್‌ ಕಲಿಕೆಯಲ್ಲಿ ಯಶಸ್ಸು ಪಡೆದು ಮುಂದೆ ಹೋಗುವವರಿಗಿಂತ, ಹಿಂದೆ ಬೀಳುವ­ವರೇ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT