ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಡಿಸೆಂಬರ್‌ನಲ್ಲಿ?

Last Updated 2 ನವೆಂಬರ್ 2014, 20:06 IST
ಅಕ್ಷರ ಗಾತ್ರ

ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆಗಾಗಿ ಇ– ಹರಾಜು ಡಿಸೆಂ ಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ದೂರಸಂಪರ್ಕ ಇಲಾಖೆ ಸ್ಪೆಕ್ಟ್ರಮ್‌ ಹಂಚಿಕೆ ಮಾಡಿರುವ ರೀತಿಯಲ್ಲಿಯೇ  ಕಲ್ಲಿದ್ದಲು ನಿಕ್ಷೇಪ ಹರಾಜು ಮಾಡಲು ಕಲ್ಲಿದ್ದಲು ಸಚಿವಾಲಯ ಸಿದ್ಧತೆಗಳನ್ನು ಆರಂಭಿಸಿದೆ.

ಹರಾಜಿನಲ್ಲಿ ಭಾಗವಹಿಸುವವರ ಆಯ್ಕೆಯ ಮಾನದಂಡಗಳು, ಗಣಿ­ಗಾರಿಕೆ ಮೂಲಸೌಕರ್ಯ ವರ್ಗಾವಣೆ, ಮೂಲ ಬೆಲೆ ನಿಗದಿ, ಭೂಮಿಯ ಮೌಲ್ಯಮಾಪನ ಮತ್ತು ಗಣಿಗೆ ಸಂಬಂಧಿಸಿದ ಇತರ ಆಸ್ತಿಯ ಮೌಲ್ಯಮಾಪನಗಳಿಗೆ ಸಂಬಂಧಿಸಿ ನಿಯಮಗಳನ್ನು ರೂಪಿಸಲು ಕಲ್ಲಿದ್ದಲು ಸಚಿವಾಲಯವು ದೂರ ಸಂಪರ್ಕ ಇಲಾಖೆಯೊಂದಿಗೆ ಸಂಪರ್ಕದಲ್ಲಿದೆ.

ಆರಂಭದಲ್ಲಿ 74 ಕಲ್ಲಿದ್ದಲು ನಿಕ್ಷೇಪಗಳನ್ನು ಹರಾಜು ಮಾಡಲಾಗುವುದು. ವಿದ್ಯುತ್‌ ಕ್ಷೇತ್ರದ ಸಂಸ್ಥೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಕಲ್ಲಿದ್ದಲು ಸಚಿವಾಲಯದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ವಿದ್ಯುತ್‌ ಘಟಕಗಳಿಗೆ ಬ್ಯಾಂಕುಗಳು ₨ 3 ಲಕ್ಷ ಕೋಟಿ ಸಾಲ ನೀಡಿವೆ. ವಿದ್ಯುತ್‌ ಘಟಕಗಳಿಗೆ ಕಲ್ಲಿದ್ದಲು ನಿಕ್ಷೇಪಗಳನ್ನು ಹಂಚಿದರೆ ಈ ಘಟಕಗಳು ಸಾಲದಿಂದ ಹೊರಬರುವುದು ಸಾಧ್ಯವಾಗುತ್ತದೆ. ಜೊತೆಗೆ 40 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯೂ ಆಗಲಿದೆ ಎಂದು ಮೂಲಗಳು ಹೇಳಿವೆ.

ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ದಿಂದಾಗಿ ಸುಪ್ರೀಂ ಕೋರ್ಟ್‌ 214 ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯನ್ನು ರದ್ದುಪಡಿಸಿತ್ತು. ಅದರಲ್ಲಿ ಹೆಚ್ಚಿನವು ವಿದ್ಯುತ್‌ ಘಟಕಗಳಿಗೆ ವಿತರಿಸಿದ ಗಣಿಗಳೇ ಆಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT