ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಹಗರಣ: ಅಧಿಕಾರಿ ಬದಲಾವಣೆ

Last Updated 8 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಲ್ಲಿದ್ದಲು ಹಗರಣದ ತನಿಖೆಯಿಂದ ಹಿರಿಯ ಅಧಿಕಾರಿಯೊಬ್ಬರು ಹಿಂದೆ ಸರಿದ ಕಾರಣ ಅವರ ಜಾಗಕ್ಕೆ ಹೆಚ್ಚುವರಿ ನಿರ್ದೇಶಕ, 1981ನೇ ತಂಡದ ಕರ್ನಾಟಕದ ಐಪಿಎಸ್‌್ ಅಧಿಕಾರಿ  ರೂಪಕ್‌್ ಕುಮಾರ್‌್ ದತ್ತ ಅವರನ್ನು ನೇಮಿಸಲಾಗಿದೆ.

‘ಜಂಟಿ ನಿರ್ದೇಶಕ, 1985ನೇ ತಂಡದ ಐಪಿಎಸ್‌್ ಅಧಿಕಾರಿ ಒ.ಪಿ.ಗಲ್ಹೋತ್ರಾ ಇನ್ನು ಮುಂದೆ ಈ ಹಗರಣಕ್ಕೆ ಸಂಬಂಧಿಸಿದ ಯಾವ ಪ್ರಕರಣವನ್ನೂ ನಿರ್ವಹಿಸುವುದಿಲ್ಲ. ಇವರ ಬದಲಿಗೆ ದತ್ತ ಅವರನ್ನು ನೇಮಿಸಲಾಗಿದೆ’ ಎಂದು ಸಿಬಿಐ ನಿರ್ದೇಶಕ ರಂಜಿತ್‌್ ಸಿನ್ಹಾ ಅವರು ಸುಪ್ರೀಂಕೋರ್ಟ್‌ನ ಎಲ್ಲ ನ್ಯಾಯ­ಮೂರ್ತಿಗಳಿಗೆ ಪತ್ರ ರವಾನಿಸಿದ್ದಾರೆ.

ಕಲ್ಲಿದ್ದಲು ಹಗರಣದಲ್ಲಿ ಗಲ್ಹೋತ್ರಾ ಸಂಬಂಧಿ ಕೂಡ ಭಾಗಿಯಾಗಿದ್ದಾರೆ ಎಂದು ವಕೀಲ ಪ್ರಶಾಂತ್‌್ ಭೂಷಣ್‌್ ಸುಪ್ರೀಂ­ಕೋರ್ಟ್‌­­ನಲ್ಲಿ  ಆರೋಪಿ­ಸಿದ್ದರು. ಈ ಹಿನ್ನೆಲೆಯಲ್ಲಿ ಗಲ್ಹೋತ್ರಾ, ತನಿಖೆ­ಯಿಂದ ಹಿಂದೆ ಸರಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT