ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸ: ಭತ್ತಕ್ಕೆ ಕುತ್ತು–ರೈತ ಕಂಗಾಲು

ನಿರೀಕ್ಷಿತ ಮಟ್ಟದಲ್ಲಿ ಬಾರದ ಮಳೆ: ಮಕ್ಕಿ ಗದ್ದೆಯಲ್ಲಿ ನೀರಿನ ಕೊರತೆ
Last Updated 3 ಸೆಪ್ಟೆಂಬರ್ 2015, 6:28 IST
ಅಕ್ಷರ ಗಾತ್ರ

ಕಳಸ: ಮಳೆಯ ಕೊರತೆಯು ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆಗೆ ಕಾರಣವಾಗಲಿದೆ ಎಂಬ ಆತಂಕದ ಹಿಂದೆಯೇ ಈ ವರ್ಷದ ಭತ್ತದ ಫಸಲಿನ ಮೇಲೂ ಪರಿಣಾಮ ಬೀರುವುದು ಖಚಿತವಾಗಿದೆ.

 ಹೋಬಳಿಯ ಮಕ್ಕಿ ಗದ್ದೆಗಳಲ್ಲಿ ಈಗಾಗಲೇ ನೀರಿನ ಕೊರತೆ ಕಂಡು ಬಂದಿದ್ದು ಅನ್ನದಾತರು ಕಂಗಾಲಾಗಿದ್ದಾರೆ. ಈ ವರ್ಷದ ಮಳೆಗೆ ಭತ್ತದ ಫಸಲಿನ ಆಸೆ ಇಟ್ಟುಕೊಳ್ಳುವಂತೆಯೇ ಇಲ್ಲ. ಈಗಾಗ್ಲೇ ಗದ್ದೆಗೆ ನೀರಿಲ್ಲದೆ ಒಸರಿನ ಜಾಗದಿಂದ ಚರಂಡಿ ಹೊಡ್ಕಂಡು ನೀರು ತರ್ತಾ ಇದ್ದೀವಿ’ ಎಂದು ಎಡದಾಳಿನ ಭತ್ತದ ಕೃಷಿಕ ಬೋವಿಪಾಲು ನಾಗೇಶ್‌ ಹೇಳುತ್ತಾರೆ.

ಭತ್ತದ ಕೃಷಿಯು ಆಕರ್ಷಣೆ ಕಳೆದು ಕೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷದ ಬಹಳಷ್ಟು ರೈತರು ಭತ್ತದ ಕೃಷಿಯನ್ನೇ ಕೈಬಿಟ್ಟಿದ್ದಾರೆ. ಬಹಳಷ್ಟು ಶ್ರಮ ವಹಿಸಿ ಭತ್ತದ ಕೃಷಿ ಮಾಡಿರುವ ರೈತರಿಗೆ ಮಳೆ ಕೊರತೆ ಭ್ರಮನಿರಸನ ಮಾಡಿದೆ.

ಸಾಮಾನ್ಯವಾಗಿ ಅಕ್ಟೋಬರ್‌ ವರೆಗೂ ನಿಯಮಿತವಾಗಿ ಬೀಳುತ್ತಿದ್ದ ಮಳೆ  ಈ ವರ್ಷ ಭತ್ತದ ಗದ್ದೆಗೆ ಸಾಕಾಗುವಷ್ಟು ನೀರು ಒದಗಿಸಿಲ್ಲ. ಈ ಹಿನ್ನೆಲೆಯಲ್ಲಿ ಭತ್ತದ ಗದ್ದೆಯ ಸಾಗುವಳಿ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಕಡಿಮೆ ಆಗಲು ಈ ಬಾರಿಯ ಮಳೆ ಕೊರತೆ ಕಾರಣ ಆಗಲಿದೆ.

ಮಳೆಯನ್ನು ನಂಬಿಕೊಂಡರೆ ನಮ್‌ ಗದ್ದೆ ಸುಟ್ಟುಕೊಳ್ಳಬೇಕಾಗುತ್ತೆ. ಈ ವಾರ ರೈತರೆಲ್ಲರೂ ಸೇರಿ ನೀರಿನ ಕಾಲುವೆ ರಿಪೇರಿ ಮಾಡಬೇಕಾಗಿದೆ
- ಮಂಜಪ್ಪ ಪೂಜಾರಿ
ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT