ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೇಬರಕ್ಕೆ ಮುಕ್ತಿ

ಅಕ್ಷರ ಗಾತ್ರ

ನಾವು ರಸ್ತೆಯಲ್ಲಿ ಸಂಚರಿಸುವಾಗ ಮಂಗ, ಕೋತಿ, ಪಕ್ಷಿಗಳಂತಹ ಹಲವಾರು ಜೀವಿಗಳು ರಸ್ತೆ ಅವಘಡಗಳಲ್ಲಿ ಸತ್ತು ಬಿದ್ದಿರುವುದನ್ನು ಕಾಣುತ್ತೇವೆ. ಆದರೆ ಬಹುತೇಕರು ಇದನ್ನು ನೋಡಿಯೂ ನೋಡದಂತೆ ತಮಗೆ ಸಂಬಂಧವೇ ಇಲ್ಲವೆಂಬಂತೆ ಹೊರಟು ಹೋಗುತ್ತಾರೆ.

ಇನ್ನು ಕೆಲವರು ಆ ಮೃತ ದೇಹಗಳ ಮೇಲೆಯೇ ವಾಹನ ಚಲಾಯಿಸಿಕೊಂಡು ಹೋಗುತ್ತಾರೆ. ಇದರಿಂದ ಆ ದೇಹಗಳಲ್ಲಿನ ಮಾಂಸ ಖಂಡಗಳು ರಸ್ತೆಯಲ್ಲೆ ಛಿದ್ರಗೊಂಡು ಅಲ್ಲೇ ಕೊಳೆಯುತ್ತವೆ. ಇದರಿಂದ ಅಲ್ಲಿನ ವಾತಾವರಣ ಸಂಪೂರ್ಣ ಕಲುಷಿತಗೊಂಡು ಗಾಳಿಯಿಂದ  ಬಹುಬೇಗನೆ ರೋಗಗಳು ಹರಡುವ ಸಾಧ್ಯತೆ ಇರುತ್ತದೆ.

ಸಾರ್ವಜನಿಕರು ಜಾಗೃತರಾಗಿ ಇಂಥ ಕಳೇಬರಗಳನ್ನು ಹೂತು ಹಾಕಿದರೆ ವಾತಾವರಣದ ಸಮತೋಲನ ಕಾಪಾಡಬಹುದು. ಮಣ್ಣಿನ ಫಲವತ್ತತೆಯೂ ಹೆಚ್ಚಾಗುತ್ತದೆ. ಜೊತೆಗೆ ಯಾವ ಜೀವಿಯೂ ಅನಾಥವಾಗಿ ಸಾಯುವಂತಹ ಸ್ಥಿತಿ ಬರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT