ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳನೇ ಮನೆ ಕಾವಲುಗಾರನಿಗೆ ಬಯ್ದಂತೆ

ಮೋದಿ ಹೇಳಿಕೆಗೆ ಮಾಯಾವತಿ ತಿರುಗೇಟು
Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಸಂಸತ್ತನ್ನು ಅಪರಾಧಿಗಳಿಂದ ಮುಕ್ತ­ಗೊಳಿಸು­ವುದಾಗಿ ಹೇಳಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹರಿಹಾಯ್ದಿದ್ದಾರೆ.

‘ಮೋದಿ ಅವರ ಹೇಳಿಕೆಗಳಿಗೆ ಸಂಬಂಧಿಸಿ­ದಂತೆ ಜನ ಇನ್ನೂ ಎಚ್ಚರ­ವಾಗಿರಬೇಕು. ನಾನು ಪ್ರಧಾನಿಯಾದರೆ ರಾಜಕೀಯ ವ್ಯವಸ್ಥೆಯಲ್ಲಿ ಸುಧಾರಣೆ, ಅಪರಾಧ ಪ್ರಕರಣ ಎದುರಿಸು­ತ್ತಿರುವ ಸಂಸದರ ವಿರುದ್ಧ ವಿಶೇಷ ತನಿಖಾ ತಂಡ ರಚನೆ ಹಾಗೂ ಸಂಸತ್ತನ್ನು ಅಪರಾಧಿ­ಗಳಿಂದ ಮುಕ್ತಗೊಳಿಸು­ವುದಾಗಿ ಮೋದಿ ಸೋಮವಾರ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ‘ಉಲ್ಟಾ ಚೋರ್‌ ಕೊತ್ವಾಲ್‌ ಕೊ ಡಾಟೆ’ (ಕಳ್ಳನೇ ಮನೆ ಕಾವಲುಗಾರನಿಗೆ ಬಯ್ದಂತೆ) ಎಂಬಂತೆ  ಎಂದು  ಮಂಗಳ­ವಾರ ಇಲ್ಲಿ ಸುದ್ದಿ­ಗಾರರಿಗೆ ತಿಳಿಸಿದ್ದಾರೆ.

‘ನಿಜವಾಗಿಯೂ ಹೇಳುವುದಾದರೆ, ಕಳಂಕಿ­ತರು, ಭ್ರಷ್ಟರು, ಅಪರಾಧ ಹಿನ್ನೆ­ಲೆಯ ಅಭ್ಯರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಮೋದಿಯವರ ಬಿಜೆಪಿಯಲ್ಲಿದ್ದಾರೆ. ಇದು ಬಿಜೆಪಿಯಲ್ಲಿ ಅತೃಪ್ತಿಗೆ ಕಾರಣವಾಗಿದೆ. ಮೋದಿ­ಯವರು ಈ ರೀತಿಯ ಹೇಳಿಕೆಗಳನ್ನು ನೀಡುವು­ದಕ್ಕೂ ಮುನ್ನ ಅವರ ಪಕ್ಷದಲ್ಲಿ ಚರ್ಚೆಯಾಗಬೇಕು’ ಎಂದು ಮಾಯಾವತಿ ಹೇಳಿದ್ದಾರೆ.

‘ಎನ್‌ಡಿಎ ಸರ್ಕಾರ ನನ್ನನ್ನು ತಾಜ್‌ ಕಾರಿಡಾರ್‌, ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಿಲುಕಿಸಿತ್ತು. ಆದರೆ, ಸುಪ್ರೀಂ­ಕೋರ್ಟ್‌ನಿಂದ ನನಗೆ ನ್ಯಾಯ ದೊರೆಯಿತು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT