ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ತೊಟ್ಟಿ ನಿರ್ಮಿಸಿ

Last Updated 25 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಗಾಂಧಿ ಬಜಾರಿನ ಬಸ್‌ ನಿಲ್ದಾಣದ ಪಕ್ಕದಲ್ಲಿ ರಸ್ತೆ ಬದಿ ವ್ಯಾಪಾರಿಗಳು ಪ್ಲಾಸ್ಟಿಕ್‌ ಕವರ್‌, ತ್ಯಾಜ್ಯ ಕಾಗದಗಳನ್ನು ಎಸೆದು ಕಸದ ರಾಶಿಯೇ ನಿರ್ಮಾಣವಾಗಿದೆ. ಮಳೆ ಬಂದಾಗ ಈ ಕಸ ನೀರಿನೊಂದಿಗೆ ಸೇರಿ ರಸ್ತೆ ಮೇಲೆಲ್ಲ ಹರಡಿಕೊಳ್ಳುತ್ತವೆ.

ಉಳಿದ ಸಮಯದಲ್ಲಿ ಗಾಳಿ ಬೀಸಿದಾಗ, ಪಾದಚಾರಿಗಳು ಮತ್ತು ಬಸ್‌ ನಿಲ್ದಾಣದಲ್ಲಿ ಕಾಯುತ್ತ ನಿಂತ ಸಾರ್ವಜನಿಕರ ಮೈಮೇಲೆ ಬೀಳುತ್ತವೆ. ಇದರಿಂದ ಜನರು ದಿನನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ದಯವಿಟ್ಟು ಬಿಬಿಎಂಪಿ ಅಧಿಕಾರಿಗಳು ಇದಕ್ಕೊಂದು ಪರಿಹಾರ ಒದಗಿಸಿಕೊಡಬೇಕು.

ಬಸ್‌ನಿಲ್ದಾಣದ ಪಕ್ಕವೇ ಒಂದು ಕಸದ ತೊಟ್ಟಿಯನ್ನು ಇಟ್ಟು ಕಸ ನಿರ್ವಹಣೆ ಮಾಡಿದರೆ ಈ ತೊಂದರೆ ತಪ್ಪಿಸಬಹುದಾಗಿದೆ. ಇಂತಹ ಜನನಿಬಿಡ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ ವಹಿಸಿದರೆ ಅದು ಹಲವು ಸಮಸ್ಯೆಗಳಿಗೆ ಮೂಲವಾಗುವ ಅಪಾಯ ಇದ್ದೇ ಇರುತ್ತದೆ.
– ಪ್ರಣತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT