ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಸುರಿಯಲು ಭೂಸ್ವಾಧೀನಕ್ಕೆ ವಿರೋಧ

Last Updated 25 ಅಕ್ಟೋಬರ್ 2014, 8:45 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬಿಬಿಎಂಪಿ ಕಸ ವಿಲೇ­ವಾರಿಯಲ್ಲಿ ತನ್ನ ಜವಾಬ್ದಾರಿ­ಯನ್ನು ಸರಿಯಾಗಿ ನಿರ್ವಹಣೆ ಮಾಡದೆ ಹಳ್ಳಿಗಳಿಗೆ ಕಸ ತಂದು ಸುರಿಯುವ ಮೂಲಕ ರೈತರನ್ನು ಒಕ್ಕಲೆಬ್ಬಿಸುತ್ತಿದೆ.  ಇದರ ವಿರುದ್ಧ ನಡೆಯುವ ಎಲ್ಲ ರೀತಿಯ ಹೋರಾಟಗಳಲ್ಲೂ ಸಕ್ರಿಯ­ವಾಗಿ ಭಾಗವಹಿಸಲಾಗುವುದು ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಮುಖಂಡ ರವಿನಾರಾಯಣರೆಡ್ಡಿ ಹೇಳಿದರು.

ಅವರು ತಾಲ್ಲೂಕಿನ ಸಾಸಲು ಹೋಬ­ಳಿಯ ಆರೂಢಿ ಹಾಗೂ ಸುತ್ತ­ಮುತ್ತಲಿನ ಗ್ರಾಮದಲ್ಲಿ ಬಿಬಿಎಂಪಿ ಕಸ ಸುರಿಯಲು 476 ಎಕರೆ ಭೂಮಿ ಸ್ವಾಧೀನಕ್ಕೆ ಒಳಪಡುತ್ತಿರುವ ಗ್ರಾಮ­ಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದರು.

ಬಿಬಿಎಂಪಿ ವೈಜ್ಞಾನಿಕ ಕಸ ವಿಲೇವಾರಿಗೆ ಆಸಕ್ತಿ ವಹಿಸುತ್ತಿಲ್ಲ. ಹೇಗಾ­ದರೂ ಮಾಡಿ ಕಸವನ್ನು ಬಿಬಿಎಂಪಿ ವ್ಯಾಪ್ತಿಯಿಂದ ಹೊರ ಸಾಗಿಸಲು ಮಾತ್ರ ಯೋಜನೆ ರೂಪಿಸುತ್ತಿದೆ. ಇದಕ್ಕೆ ಸಾಕ್ಷಿ­ಯಾಗಿ ತಾಲ್ಲೂಕಿನ ಗುಂಡ್ಲಹಳ್ಳಿ ಹಾಗೂ ಬೆಂಗಳೂರು ಸಮೀಪದ ಮಂಡೂರು ಗ್ರಾಮದ ಸಮೀಪದ ಕಸದ ರಾಶಿ ನೋಡಿದರೆ ಅರ್ಥವಾಗುತ್ತದೆ. ಈ ಭಾಗದ ರೈತರು ಈಗಲೆ ಎಚ್ಚೆತ್ತುಕೊಂಡು ಹೋರಾಟ ನಡೆಸದಿದ್ದರೆ ರೈತರು ಗ್ರಾಮಗಳನ್ನು ತೊರೆಯುವಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಆರೂಢಿ ಗ್ರಾಮದ ಹಿರಿಯ ರೈತ ನರಸಿಯಪ್ಪ, ವಕೀಲರಾದ ಲೋಕೇಶ್‌ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT