ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಾಚಾರದ ಪರೀಕ್ಷೆ

ಅಕ್ಷರ ಗಾತ್ರ

ರಾಜ್ಯದಲ್ಲಿ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಕೆಪಿಎಸ್‌ಸಿ ನಡೆಸಿದ ಪರೀಕ್ಷೆಯನ್ನು ನಾನೂ ಬರೆದೆ. ಅದರಲ್ಲಿ ನಮ್ಮ ರಾಜ್ಯದ ಆಡಳಿತ ಭಾಷೆಯಾದ ಕನ್ನಡಕ್ಕೂ ಒಂದು ಸಾಮಾನ್ಯ ಕನ್ನಡ ಪ್ರಶ್ನೆಪತ್ರಿಕೆ ನಿಗದಿಗೊಳಿಸಿದ್ದರು. ಅದು ಕನ್ನಡ ಮಾಧ್ಯಮದ ವಿದ್ಯಾರ್ಥಿಯಾದ ನನಗೆ ಹೆಮ್ಮೆಯ ವಿಷಯವಾಗಿತ್ತು.

ತುಂಬ ಹುರುಪಿನಿಂದ ಪ್ರಶ್ನೆಗಳಿಗೆ, ಕೆಳಗೆ ನೀಡಲಾಗಿದ್ದ  ಬಹು ಆಯ್ಕೆಗಳಲ್ಲಿ ಸರಿಯಾದ ಉತ್ತರಗಳನ್ನು ಹುಡುಕುತ್ತಿದ್ದೆ. ನನಗೆ ಆಯೋಗ ನೀಡಿದ ಸಾಮಾನ್ಯ ಕನ್ನಡದ ‘ಬಿ’ ಶ್ರೇಣಿ ಪ್ರಶ್ನೆಪತ್ರಿಕೆಯ 49 ಮತ್ತು 50ನೇ ಪ್ರಶ್ನೆಗಳಿಗೆ ಸರಿಯಾದ ಉತ್ತರವೇ ಸಿಗಲಿಲ್ಲ. ಸ್ವಲ್ಪ ಗೊಂದಲಕ್ಕೆ ಒಳಗಾದ ನಾನು ಪರೀಕ್ಷಾ ಕೊಠಡಿ ಮೇಲ್ವಿಚಾರಕರನ್ನು ಕೇಳಿದಾಗ ‘ಅದು ನಮಗೆ ಗೊತ್ತಿಲ್ಲ, ನೀವು ಆಯೋಗಕ್ಕೆ ಕೇಳಬೇಕು’ ಎಂಬ ಉತ್ತರ ಸಿಕ್ಕಿತು.

ಪರೀಕ್ಷೆ ನಂತರ ನನ್ನ ಹಿರಿಯ ವಿದ್ಯಾರ್ಥಿ ಮಿತ್ರರನ್ನು ಕೇಳಿದಾಗ ಬಹು ಆಯ್ಕೆ ಉತ್ತರಗಳು ಸರಿ ಇರಲಿಲ್ಲವೆಂಬ ವಿಷಯ ತಿಳಿಯಿತು. ಯಾಕೆ ಹೀಗೆ ಆಯೋಗದ ಪರೀಕ್ಷೆಗಳಲ್ಲಿ ತಪ್ಪುಗಳು ಮರುಕಳಿಸುತ್ತವೆ? ಆಯೋಗವು ಅನುಭವಿ ಪರಿಣತರಿಂದ ಪ್ರಶ್ನೆಪತ್ರಿಕೆ ಸಿದ್ಧಪಡಿಸುತ್ತದೆಯೊ ಅಥವಾ ಕಾಟಾಚಾರಕ್ಕೆ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದೆಯೊ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT