ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನುಬಾಹಿರ

Last Updated 27 ಜುಲೈ 2016, 19:30 IST
ಅಕ್ಷರ ಗಾತ್ರ

ವರ್ಣದ್ವೇಷವನ್ನು ಮನುಸ್ಮೃತಿ ಸದೃಶಗೊಳಿಸಿದರೆ, ಈಗ ಮನುಸ್ಮೃತಿಯ  ಅನುಯಾಯಿಗಳು ಅದನ್ನು ಕಾರ್ಯರೂಪಕ್ಕೆ ಇಳಿಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಚುಕ್ಕಾಣಿ ಹಿಡಿದಾಗಲೆಲ್ಲಾ ಕೆಳವರ್ಗ ಅದರಲ್ಲೂ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ಮೇಲೆ  ಹಲ್ಲೆಗಳು ಹೆಚ್ಚುತ್ತಾ ಹೋಗುತ್ತಿವೆ.

ಚುನಾವಣೆಗಳಲ್ಲಿ ಯಶಸ್ಸು ಸಾಧಿಸುವ ಉದ್ದೇಶದಿಂದ ನಗರಗಳಲ್ಲಿ ಇತ್ತೀಚೆಗೆ ಭಾರಿ ಪ್ರಮಾಣದಲ್ಲಿ ಗೋರಕ್ಷಕರು ಕಾಣಿಸಿಕೊಳ್ಳುತ್ತಿದ್ದಾರೆ. ಗುಜರಾತ್‌ನ ಊನಾ ಎಂಬಲ್ಲಿ ದಲಿತ ಯುವಕರು ಗೋವನ್ನು ಕೊಂದರೆಂದು ಸಂಘ ಪರಿವಾರದ ಹಿತೈಷಿಗಳು ಆ ಯುವಕರನ್ನು ನಗ್ನಗೊಳಿಸಿ, ಕೈಗಳನ್ನು ಕಟ್ಟಿಹಾಕಿ ಕಬ್ಬಿಣದ ಸಲಾಕೆಗಳಿಂದ ಬಾರಿಸಿರುವುದು ಖಂಡನೀಯ.

ಚಿಕ್ಕಮಗಳೂರಿನಲ್ಲಿ ಚಮ್ಮಾರರು ಗೋವಿನ ಚರ್ಮ ಸುಲಿದರೆಂಬ ಕಾರಣಕ್ಕೆ ಅವರನ್ನು ಥಳಿಸಿರುವುದು ಅಮಾನವೀಯ.  ಗೋವುಗಳು ಹೊಟ್ಟೆಗಿಲ್ಲದೆ ಕಾಯಿಲೆಗಳಿಂದ ನರಳುತ್ತಾ ಬೀದಿ ಬೀದಿಗಳಲ್ಲಿ ಅಲೆಯುತ್ತಿರುವುದನ್ನು ನೋಡಿಯೂ ಸುಮ್ಮನಿರುವುದು, ಗೋಶಾಲೆಗಳಲ್ಲಿ ಗೋಮರ್ದನವಾಗುತ್ತಿದ್ದರೂ ಕಣ್ಣುಮುಚ್ಚಿ ಕುಳಿತುಕೊಳ್ಳುವುದು ಸರಿಯೇ? ರಸ್ತೆ ರಸ್ತೆಗಳಲ್ಲಿ ಲಾರಿಗಳನ್ನು ತಡೆದು ದಲಿತರನ್ನು ಸದೆಬಡಿಯುವುದು ಕಾನೂನು ಬಾಹಿರವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT