ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್‌ ಚಿತ್ರೋತ್ಸವದಲ್ಲಿ ರಿಚಾ

Last Updated 17 ಮೇ 2016, 19:30 IST
ಅಕ್ಷರ ಗಾತ್ರ

ಕಾನ್‌ ಚಿತ್ರೋತ್ಸವದಲ್ಲಿ ಭಾರತೀಯ ಸಿನಿಮಾವನ್ನು ಪ್ರತಿನಿಧಿಸುವ ಅವಕಾಶ  ಸಿಕ್ಕಿರುವುದಕ್ಕೆ ಬಾಲಿವುಡ್‌ ನಟಿ ರಿಚಾ ಛಡ್ಡಾ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಈ ವರ್ಷ  ರೀಚಾ ಅಭಿನಯದ ‘ಸರರ್ಬಿಜ್‌’ ಸಿನಿಮಾ ಕಾನ್‌ ಚಿತ್ರೋತ್ಸವದಲ್ಲಿ ಭಾರತೀಯ ಸಿನಿಮಾವನ್ನು ಪ್ರತಿನಿಧಿಸುತ್ತಿದೆ. ಇದು ಕಾನ್‌ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿರುವ ರೀಚಾ ಅಭಿನಯದ ಮೂರನೇ ಸಿನಿಮಾ.

‘ಮೂರು ಬಾರಿ ಕಾನ್‌ ಚಿತ್ರೋತ್ಸದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಸಂತೋಷದ ವಿಚಾರ. ಇದು ನನ್ನ ಅದೃಷ್ಟ. ಅದರಲ್ಲಿಯೂ ಭಾರತೀಯ ಸಿನಿಮಾವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ನನ್ನ ವಿನಯವನ್ನು ಹೆಚ್ಚಿಸಿದೆ’ ಎಂದು ರೀಚಾ ಹೇಳಿಕೊಂಡಿದ್ದಾರೆ.

2012ರಲ್ಲಿ ‘ಗ್ಯಾಂಗ್ಸ್‌ ಆಫ್‌ ವಾಸ್ಸೆಪುರ್‌’ ಸಿನಿಮಾದ ಮೂಲಕ ಬಾಲಿವುಡ್‌ ಅಂಗಳಕ್ಕೆ ಅಡಿಯಿಟ್ಟ ರೀಚಾ, 2015ರಲ್ಲಿ ತೆರೆಕಂಡ ‘ಮಸಾನ್‌’ ಚಿತ್ರದ ಅಭಿನಯಕ್ಕಾಗಿ ಸಾಕಷ್ಟು ಪ್ರಶಂಸೆ ಗಿಟ್ಟಿಸಿಕೊಂಡಿದ್ದರು. ಈ ಚಿತ್ರಕ್ಕೆ ಕಳೆದ ವರ್ಷದ ಕಾನ್‌ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಯೂ ಸಿಕ್ಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT