ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್‌ ಕ್ರೀಡಾಕೂಟದ ಆತಿಥ್ಯ ಡರ್ಬನ್‌ಗೆ

Last Updated 2 ಸೆಪ್ಟೆಂಬರ್ 2015, 10:09 IST
ಅಕ್ಷರ ಗಾತ್ರ

ಆಕ್ಲೆಂಡ್‌ (ಐಎಎನ್‌ಎಸ್‌/ಪಿಟಿಐ):ನಿರೀಕ್ಷೆಯಂತೆ 2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದ (ಸಿಡಬ್ಲ್ಯುಜಿ) ಆತಿಥ್ಯದ ಭಾಗ್ಯ ದಕ್ಷಿಣ ಆಫ್ರಿಕಾದ ಡರ್ಬನ್‌ ನಗರಕ್ಕೆ ಲಭಿಸಿದೆ. ಈ ಮೂಲಕ ಈ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲಿರುವ ಮೊದಲ ಆಫ್ರಿಕನ್ ನಗರ ಎಂಬ ಹೆಗ್ಗಳಿಕೆಗೂ ಡರ್ಬನ್ ಪಾತ್ರವಾಗಿದೆ.

ನ್ಯೂಜಿಲೆಂಡ್‌ನಲ್ಲಿ ಬುಧವಾರ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟ ಫೆಡೆರೆಷನ್‌ನ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಕ್ರೀಡಾಕೂಟಕ್ಕೆ 85 ವರ್ಷಗಳ ಇತಿಹಾಸವಿದೆ. ಮೊದಲಿಗೆ 2022ರ ಕ್ರೀಡಾಕೂಟದ ಆತಿಥ್ಯಕ್ಕೆ ಬಿಡ್‌ ಸಲ್ಲಿಸಿದ್ದ ಕೆನಡಾದ ಎಡ್ಮಂಟನ್‌,  2015ರ ಫೆಬ್ರುವರಿಯಲ್ಲಿ ಆರ್ಥಿಕ ಸಂಕಷ್ಟದ ಕಾರಣ ನೀಡಿ ಸ್ಪರ್ಧೆಯಿಂದ ಹಿಂದೆ ಸರಿದಿತ್ತು. ಬಳಿಕ ಡರ್ಬನ್ ಮಾತ್ರವೇ ಸ್ಪರ್ಧೆಯಲ್ಲಿ ಉಳಿದಿತ್ತು.

ಈ ಕ್ರೀಡಾಕೂಟವು 2022ರ ಜುಲೈ 18ರಿಂದ 30ರ ವರೆಗೂ ನಡೆಯುವ ಸಾಧ್ಯತೆಗಳಿವೆ.

ಇದಕ್ಕೂ ಮೊದಲು ಅಂದರೆ 2018ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನ ಗೋಲ್ಡ್‌ ಕೋಸ್ಟ್‌ ನಗರ ಆತಿಥ್ಯವಹಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT