ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಾಗೃಹಗಳಲ್ಲಿ ಸಾವು: ಕರ್ನಾಟಕದಲ್ಲೇ ಹೆಚ್ಚು

Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾರಾಗೃಹಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರು ಮತ್ತು ಸಹಜವಾಗಿ ಸಾಯುವವರ ಪ್ರಮಾಣ ಕರ್ನಾಟಕದಲ್ಲಿ ಹೆಚ್ಚಿಗೇ ಇರುವ ಅಂಶ ಬಯಲಿಗೆ ಬಂದಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಾಡಿರುವ ಅಧ್ಯಯನದ ಪ್ರಕಾರ 2008ರಿಂದ ಈಚೆಗೆ ರಾಜ್ಯದ ಕಾರಾಗೃಹಗಳಲ್ಲಿ 600 ಮಂದಿ ಸತ್ತಿದ್ದಾರೆ. ರಾಷ್ಟ್ರೀಯ ಸರಾಸರಿಗೆ (375) ಹೋಲಿಸಿದರೆ ರಾಜ್ಯದಲ್ಲಿ ಸತ್ತವರ ಸಂಖ್ಯೆ ಅತ್ಯಧಿಕವಾಗಿದೆ. ಆದರೆ, ಕಾರಾಗೃಹಗಳಲ್ಲಿ ವೈದ್ಯಕೀಯ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಿದ  ನಂತರ ಸಾಯುವವರ ಸಂಖ್ಯೆ ಕಡಿಮೆಯಾಗಿರುವುದು ಅಂಕಿ ಅಂಶಗಳ ಮೂಲಕ ಗೊತ್ತಾಗಿದೆ.

2007ರಿಂದ ಐದು ವರ್ಷಗಳಲ್ಲಿ  (ಕರ್ನಾಟಕದಲ್ಲಿ ನಾಲ್ಕು ವರ್ಷ) ಕಾರಾಗೃಹಗಳಲ್ಲಿ ಸತ್ತವರ ಅಂಕಿ ಅಂಶಗಳನ್ನು ಆಯೋಗ ಕಲೆಹಾಕಿದೆ. ಆ ಪ್ರಕಾರ ತಮಿಳುನಾಡು (480), ಪಂಜಾಬ್‌, ಮಹಾರಾಷ್ಟ್ರ ಮತ್ತು ರಾಜಸ್ತಾನ ( 450).

ಆತ್ಮಹತ್ಯೆ ಮಾಡಿಕೊಂಡವರ ಪ್ರಮಾಣ ರಾಷ್ಟ್ರಮಟ್ಟದಲ್ಲಿ ಸರಾಸರಿ ಶೇ 16.9ರಷ್ಟಿದ್ದರೆ, ಕರ್ನಾಟಕದಲ್ಲಿ ಶೇ 76.14ರಷ್ಟಿದೆ. ತಮಿಳುನಾಡು (ಶೇ 58.3), ರಾಜಸ್ತಾನ (ಶೇ 43.27). ಕೆಲವು ರಾಜ್ಯಗಳ ಕಾರಾಗೃಹಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಪ್ರಮಾಣ ಹೆಚ್ಚಾಗಿರುವುದು ಅಂಕಿ ಅಂಶಗಳ ಮೂಲಕ ಬೆಳಕಿಗೆ ಬಂದಿದೆ.

ಅಂಕಿ ಅಂಶಗಳು (ಶೇಕಡವಾರು)
16.9 ಆತ್ಮಹತ್ಯೆ ಮಾಡಿಕೊಂಡವರ ರಾಷ್ಟ್ರೀಯ ಸರಾಸರಿ ಪ್ರಮಾಣ
76.14 ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT