ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಖಾನೆ ಮುಚ್ಚಲು ಕೇಂದ್ರ ನಿರ್ಧಾರ

ಎಚ್‌ಎಂಟಿ ಕೈಗಡಿಯಾರ
Last Updated 11 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ನೌಕರರ ಸಂಬಳ ಪಾವತಿ-­ಸಲು ಪರದಾಡುತ್ತಿರುವ ಎಚ್‌ಎಂಟಿ ಕೈಗಡಿ­ಯಾರ ಕಾರ್ಖಾನೆಯನ್ನು ಬಂದ್‌ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಒಂದು ಕಾಲಕ್ಕೆ ಹೆಮ್ಮೆಯ ಸಂಸ್ಥೆಯಾ­ಗಿದ್ದ ಎಚ್‌ಎಂಟಿ 1961ರಲ್ಲಿ ಆರಂಭ­ವಾಗಿದ್ದು, ಹದಿನಾಲ್ಕು ವರ್ಷಗಳಿಂದ ನಷ್ಟ ಅನುಭವಿಸುತ್ತಿದೆ. 2011– 12ರಲ್ಲಿ 224 ಕೋಟಿ ನಷ್ಟಕ್ಕೆ ಒಳಗಾಗಿದ್ದ ಈ ಸಂಸ್ಥೆ 2012– 13ರಲ್ಲಿ 242 ಕೋಟಿ ನಷ್ಟ ಅನುಭವಿಸಿದೆ. ಸುಮಾರು 700 ಕೋಟಿ ವೇತನ ಮತ್ತಿತರ ಬಾಕಿ ಪಾವತಿಸಬೇಕಿದೆ.

ಕೇಂದ್ರ ಸರ್ಕಾರ ಎಚ್‌ಎಂಟಿಗೆ ಹಣಕಾಸು ಬೆಂಬಲ ಮತ್ತು ಸಾಲದ ನೆರವು ನೀಡುತ್ತಿದೆ. ಈಗಾಗಲೇ ಎಚ್‌­ಎಂಟಿ ಗಡಿಯಾರ ಸಂಸ್ಥೆ ಮುಚ್ಚಲು ನಿಶ್ಚ­ಯಿಸಿದ್ದು, ಸರ್ಕಾರಿ ಉದ್ಯಮಗಳ ಪುನರ್‌ರಚನಾ ಮಂಡಳಿ ಹಸಿರು ನಿಶಾನೆ ತೋರಿಸಿದೆ.

ಸಂಸ್ಥೆಯ ನಿರ್ದೇಶಕ ಮಂಡಳಿಯೂ ಇದಕ್ಕೆ ಒಪ್ಪಿಗೆ ನೀಡಿದೆ. ಈ ಸಂಸ್ಥೆಯನ್ನು ಮುಚ್ಚುವ ಪ್ರಕ್ರಿಯೆ ಸದ್ಯದಲ್ಲೇ ಆರಂಭ­ವಾ­ಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕಳೆದ ವರ್ಷದ ಮಾರ್ಚ್‌ ಅಂತ್ಯದವರೆಗೆ ಸಂಸ್ಥೆಯಲ್ಲಿ 1,100 ಉದ್ಯೋಗಿಗಳಿದ್ದರು. ಈಗಾಗಲೇ ಎಚ್‌ಎಂಟಿ ಬೆಂಗಳೂರು ಘಟಕದ ಜಮೀನು ಮಾರಲಾಗಿದೆ. ಈಚೆಗೆ ತುಮ­ಕೂರು ಸಂಸದ ಮುದ್ದ ಹನುಮೇ­ಗೌಡರು ಲೋಕಸಭೆಯಲ್ಲಿ ಎಚ್ಎಂಟಿ ಕುರಿತು ಪ್ರಸ್ತಾಪಿಸಿದ್ದರು.

ಬುಧವಾರ ಸಂಸತ್ತಿನ ಕೈಗಾರಿಕಾ ಸ್ಥಾಯಿ ಸಮಿತಿ ಸಭೆ ಸೇರಿತ್ತು. ಈ ಸಭೆಯಲ್ಲೂ ಎಚ್ಎಂಟಿ ವಿಷಯ ಪ್ರಸ್ತಾಪ­ವಾಯಿತು. ಎಚ್‌ಎಂಟಿ ತುಮಕೂರು ಘಟಕದ ಜಮೀನನ್ನು ಮಾರಾಟ ಮಾಡದೆ ಬೇರೆ ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕೆಂದು ತುಮಕೂರು ಲೋಕಸಭೆ ಸದಸ್ಯರು ಆಗ್ರಹಿಸಿದ್ದಾರೆ. ಈ ತಿಂಗಳ 22ರಂದು ಕೈಗಾರಿಕಾ ಸ್ಥಾಯಿ ಸಮಿತಿ ಮತ್ತೆ ಸಭೆ ಸೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT