ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೊರೇಷನ್‌ ಬ್ಯಾಂಕ್‌ ನಿವ್ವಳ ಲಾಭ ತೀವ್ರ ಇಳಿಕೆ

Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಮಂಗಳೂರು: ಕಾರ್ಪೊರೇಷನ್‌ ಬ್ಯಾಂಕ್‌ ಡಿಸೆಂಬರ್‌ 31ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ಲಾಭದಲ್ಲಿ ತೀವ್ರ ಕುಸಿತ ಕಂಡಿದೆ.

2014–15ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ₹ 147 ಕೋಟಿ  ಲಾಭ ಗಳಿಸಿದ್ದ ಬ್ಯಾಂಕ್ ಪ್ರಸಕ್ತ ಅವಧಿಯಲ್ಲಿ ನಿವ್ವಳ ಲಾಭದಲ್ಲಿ
₹ 388 ಕೋಟಿ ನಷ್ಟ ಅನುಭವಿಸಿದೆ ಎಂದು ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕ ಜೈಕುಮಾರ್‌ ಗರ್ಗ್‌ ತಿಳಿಸಿದ್ದಾರೆ.

ನಿರ್ವಹಣಾ ಲಾಭದಲ್ಲಿ  ಶೇ 3.79 ರಷ್ಟು ಹಿನ್ನಡೆಯಾಗಿದ್ದು, ₹ 699 ಕೋಟಿ ನಿರ್ವಹಣಾ ಲಾಭ ದಾಖಲಿಸಿದೆ.  ಕಳೆದ ವರ್ಷದ ಇದೇ ಅವಧಿಯಲ್ಲಿ ಇದು
₹ 727 ಕೋಟಿ ಆಗಿತ್ತು.

ಕಳೆದೆರಡು ತ್ರೈಮಾಸಿಕದಲ್ಲಿ ಆರ್‌ಬಿಐ ತೆಗೆದುಕೊಂಡ ಕ್ರಮಗಳಿಂದ ಹಿನ್ನಡೆಯ ಪ್ರಮಾಣವು ಡಿಸೆಂಬರ್‌ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಹೆಚ್ಚಾಗಿದೆ. ವಸೂಲಾಗದ ಸಾಲದ ಖಾತೆಗಳನ್ನು ಲಾಭದ ಲೆಕ್ಕಾಚಾರದಲ್ಲಿ ಪರಿಗಣಿಸು ವಂತೆ ಆರ್‌ಬಿಐ ಸೂಚಿಸಿರುವುದೇ ಈ ಹಿನ್ನಡೆಗೆ ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ. ಆದರೆ ಕೊನೆಯ ತ್ರೈಮಾಸಿಕದಲ್ಲಿ ಈ ಹಿನ್ನಡೆಯನ್ನು ಬ್ಯಾಂಕ್‌ ಸರಿಪಡಿಸಿಕೊಂಡು ಲಾಭದತ್ತ ಹೆಜ್ಜೆ ಹಾಕಲಿದೆ ಎಂದರು.

ಒಟ್ಟು ಮೂರು ತ್ರೈಮಾಸಿಕದ ನಿವ್ವಳ ಲಾಭದಲ್ಲಿ  ಶೇ 99.17ರಷ್ಟು ನಷ್ಟ ಉಂಟಾಗಿದೆ. ಒಟ್ಟು ವಹಿವಾಟಿನಲ್ಲಿ ಶೇ 3.83 ರಷ್ಟು ಪ್ರಗತಿಯಾಗಿದ್ದು  ಕಳೆದ ಅವಧಿಯಲ್ಲಿ ಇದು ₹ 12,545 ಕೋಟಿ ಗಳಿಂದ ₹ 3,40,199 ಕೋಟಿಗಳಿ ಗೇರಿದೆ. ಅದೇ ರೀತಿ ಠೇವಣಿಯಲ್ಲಿಯೂ ಬ್ಯಾಂಕ್‌ ಶೇ 5.34 ರಷ್ಟು ಪ್ರಗತಿ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT