ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಕಾನೂನು ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಅಸ್ತು

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕೆಲವು ಪಕ್ಷಗಳ ತೀವ್ರ ವಿರೋಧದ ನಡುವೆಯೂ ೧೯೯೮ನೇ ಇಸವಿಯ ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಸೂದೆಯು ರಾಜ್ಯಸಭೆ­ಯಲ್ಲಿ ಮಂಗಳವಾರ ಅಂಗೀಕಾರ­ಗೊಂಡಿತು. ಇದರಿಂದ ೧೦ಕ್ಕಿಂತ ಹೆಚ್ಚು ಹಾಗೂ ಗರಿಷ್ಠ ೪೦ ಸಿಬ್ಬಂದಿಯನ್ನು ಹೊಂದಿರುವ ಸಂಸ್ಥೆಗಳಿಗೆ ಕೆಲವು ಪ್ರಮುಖ ವಿನಾ­ಯಿತಿಗಳು ಸಿಗಲಿವೆ. ಸಿಪಿಎಂ, ಸಿಪಿಐ, ಎಸ್‌ಪಿ ಮತ್ತು ಜೆಡಿಯು ಈ ತಿದ್ದು­ಪಡಿ­ಯನ್ನು ತೀವ್ರವಾಗಿ ವಿರೋಧಿಸಿದವು.

ಅಂದರೆ, ಈಗ ೧೦ಕ್ಕಿಂತ ಹೆಚ್ಚು ಹಾಗೂ ೪೦ ಸಂಖ್ಯೆಯ ಮಿತಿಯೊಳಗೆ ಸಿಬ್ಬಂದಿ ಹೊಂದಿರುವ ಸಂಸ್ಥೆ­ಗಳು ದಾಖ­ಲಾತಿ ಪುಸ್ತಕ ನಿರ್ವಹಿಸುವುದು ಹಾಗೂ ವರಮಾನ ಲೆಕ್ಕಪತ್ರ ವಿವರ ಸಲ್ಲಿಸಬೇಕಾಗಿಲ್ಲ. ಈ ಮುಂಚೆ, ೧೦ಕ್ಕಿಂತ ಹೆಚ್ಚು ಹಾಗೂ ೧೯ಕ್ಕಿಂತ ಕಡಿಮೆ ಸಿಬ್ಬಂದಿ ಇರುವ ಸಂಸ್ಥೆಗಳಿಗೆ ಈ ವಿನಾಯಿತಿ ಇತ್ತು.

ದಾಖಲಾತಿ ವಿವರವನ್ನು ಕಂಪ್ಯೂಟರ್‌, ಫ್ಲಾಪಿ, ಡಿಸ್ಕೆಟ್‌ ಅಥವಾ ಬೇರೆ ಯಾವುದೇ ಎಲೆಕ್ಟ್ರಾನಿಕ್‌ ಉಪಕರ­ಣ­ದಲ್ಲಿ ನಿರ್ವಹಿಸಲು ತಿದ್ದುಪಡಿಯಾ­ಗಿ­ರುವ ಮಸೂದೆಯಲ್ಲಿ ಅವಕಾಶ ಕಲ್ಪಿಸ­ಲಾಗಿದೆ. ಅಲ್ಲದೇ ೪೦ ಸಿಬ್ಬಂದಿಗಳಿರುವ ಕಂಪೆನಿಗಳ ಮಾಲೀಕರಿಗೆ ವರಮಾನ ಲೆಕ್ಕಪತ್ರ ವಿವರ ಸಲ್ಲಿಸಲು ಸೂಚಿಸಿದಾಗ ಅದನ್ನು ಕಾರ್ಮಿಕ ಇನ್ಸ್‌ಪೆಕ್ಟರ್‌ ಅವ­ರಿಗೆ ಅಂತರ್ಜಾಲದ ಮೂಲಕವೇ ಸಲ್ಲಿಸಬ­ಹುದು. ಒಂದೊಮ್ಮೆ ಇದನ್ನು ಕಂಪೆನಿ ಕಳುಹಿಸ­ದಿ­ದ್ದರೂ ಅದಕ್ಕಾಡಿ ದಂಡ ವಿಧಿಸುವ ಅಧಿಕಾರ ಇರುವುದಿಲ್ಲ.

ಸಿಪಿಎಂ, ಸಿಪಿಐ ವಿರೋಧ
ದೇಶದಲ್ಲಿರುವ ಶೇ ೭೦ಕ್ಕೂ ಹೆಚ್ಚು ಕಂಪೆನಿಗಳಿಗೆ ಇದ­ರಿಂದ ಅನುಕೂಲವಾಗಿ ಶೇ ೮೦ರಷ್ಟು ಕಾರ್ಮಿ­ಕರು ಈಗಿರುವ ಭದ್ರತೆಯನ್ನು ಕಳೆದು­ಕೊಳ್ಳ­ಲಿ­ದ್ದಾರೆ ಎಂಬುದು ಸಿಪಿಎಂ, ಸಿಪಿಐ ಮತ್ತಿತರ ಪಕ್ಷಗಳ ಆಕ್ಷೇಪವಾಗಿದೆ. ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅವರು ಈ ಪ್ರಸ್ತಾವವನ್ನು ಮತಕ್ಕೆ ಹಾಕಬೇಕು ಎಂದು ಒತ್ತಾಯಿಸಿದರು. ಆದರೆ ಕಾಂಗ್ರೆಸ್‌ ಪಕ್ಷವು ತಿದ್ದುಪಡಿಯನ್ನು ಬೆಂಬಲಿ­ಸಿದ್ದರಿಂದ ಅವುಗಳ ವಿರೋಧಕ್ಕೆ ಬಲ ಬರಲಿಲ್ಲ. ಸಿಪಿಎಂ, ಜೆಡಿಯು ಮತ್ತು ಎಸ್‌ಪಿ ಸದಸ್ಯರು ಇದನ್ನು ವಿರೋಧಿಸಿ ಸದನದಿಂದ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT