ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಿಗೆ ಬೀಳುವುದು ನಿಲ್ಲಿಸಿ: ಸಂಸದರಿಗೆ ಮೋದಿ ಕಿವಿಮಾತು

Last Updated 6 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಟ್ಟಂಗಿ ಸಂಸ್ಕೃತಿ ವಿರುದ್ಧ ಕಿಡಿಕಾರಿ­ರುವ ಪ್ರಧಾನಿ ನರೇಂದ್ರ ಮೋದಿ, ‘ಬಿಜೆಪಿ ಸಂಸದರು ನನ್ನ ಕಾಲಿಗೆರಗಿ ನಮಸ್ಕರಿಸುವುದನ್ನು ಬಿಡಬೇಕು’ ಎಂದು ಹೇಳಿದರು. ತಮ್ಮದು ಮಾತ್ರವಲ್ಲ, ಯಾರದೇ ಕಾಲಿಗೂ ಎರಗಬಾರದು ಎಂದು ಅವರು ಹೇಳಿದರು.

ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಶುಕ್ರವಾರ ನಡೆದ ಬಿಜೆಪಿ ಸಂಸ­ದೀಯ ಪಕ್ಷದ ಸಭೆಯಲ್ಲಿ ನೂತನ ಸಂಸದರಿಗೆ ಕಿವಿಮಾತು ಹೇಳಿದರು.
ಉತ್ತಮ ಸಂಸದೀಯ ಪಟುಗಳಾಗಿ ‘ಪ್ರಜಾಪ್ರಭುತ್ವದ ಮಂದಿರ’ದಲ್ಲಿ ತಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮೋದಿ ಅವರು ಸಂಸದರಿಗೆ ಸಲಹೆ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

ಗಾಂಧಿ ಕುಟುಂಬ ಮತ್ತು ಕೆಲ ಪ್ರಾಂತೀಯ ಪಕ್ಷಗಳ ಕುಟುಂಬದವರ ಸುತ್ತ ಭಟ್ಟಂಗಿಗಳೇ ಆವರಿಸಿ­ಕೊಂಡಿದ್ದಾರೆ ಎಂದು ಈ ಹಿಂದೆ ಬಿಜೆಪಿ ಆರೋಪ ಮಾಡಿತ್ತು. ಆ ಕಾರಣಕ್ಕಾಗಿ ಈ ಆಚರಣೆ ನಿಲ್ಲಿಸುವಂತೆ ಪಕ್ಷದ ಸಂಸದರಿಗೆ ಮೋದಿ ಅವರು ಸಲಹೆ ಮಾಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT