ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆಗೆ ಬಿದ್ದ ರೈಲು: 19 ಸಾವು

Last Updated 4 ಜುಲೈ 2015, 20:19 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಐಎಎನ್‌ಎಸ್‌):  ಸೇತುವೆ ಕುಸಿದು ಸೇನಾ ರೈಲೊಂದರ  ನಾಲ್ಕು ಬೋಗಿಗಳು ಕಾಲುವೆಗೆ ಬಿದ್ದ ಪರಿಣಾಮ ಸೇನಾ ಸಿಬ್ಬಂದಿ ಸೇರಿದಂತೆ 19 ಮಂದಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಗುಜ್ರನ್‌ವಾಲಾ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.

ನೀರಿನಿಂದ ಮೂರು ಬೋಗಿಗಳನ್ನು  ಪಾಕಿಸ್ತಾನದ ರೈಲ್ವೆ ಸಿಬ್ಬಂದಿ ಹೊರತೆಗೆದಿದ್ದು, ರೈಲ್ವೆ ಎಂಜಿನ್‌ ಈವರೆಗೂ ಪತ್ತೆಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಶವಗಳನ್ನು ಮೃತ ಕುಟುಂಬಗಳಿಗೆ ಹಸ್ತಾಂತರಿಸಲಾಗಿದ್ದು, ಪಂಜಾಬ್‌ ಗುಜ್ರನ್‌ವಾಲಾ ದಂಡು ರೈಲು ನಿಲ್ದಾಣ ದಲ್ಲಿ ಮೃತಪಟ್ಟ ಪ್ರಯಾಣಿಕರಿಗೆ ‌ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಘಟನೆ ಕುರಿತು ತನಿಖೆ ನಡೆಸುವಂತೆ 7 ಜನರನ್ನು ಒಳಗೊಂಡ ಅಧಿಕಾರಿಗಳ ತಂಡವನ್ನು ನೇಮಿಸಲಾಗಿದೆ  ಎಂದು ‘ಡಾನ್‌’ ಶನಿವಾರ ವರದಿ ಮಾಡಿದೆ.
ಅಪಘಾತಕ್ಕೀಡಾದ ರೈಲಿನ 21 ಬೋಗಿಗಳನ್ನು ಹತ್ತಿರದ ರೈಲು ನಿಲ್ದಾಣಕ್ಕೆ ತರಲಾಗಿದ್ದು,  ಹಳಿಯನ್ನು ಸರಿಪಡಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT