ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಕಂಪೌಂಡ್‌ಗೆ ₹ 50 ಲಕ್ಷ: ಭರವಸೆ

Last Updated 5 ಮಾರ್ಚ್ 2015, 7:38 IST
ಅಕ್ಷರ ಗಾತ್ರ

ಯಾದಗಿರಿ:  ಯುವ ಜನತೆ ಜೀವನದಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳುವ ಅವ­ಶ್ಯಕತೆ ಇದೆ ಎಂದು ಶಾಸಕ ಡಾ.ಎ.ಬಿ. ಮಾಲಕರಡ್ಡಿ ಹೇಳಿದರು. ಮಂಗಳವಾರ ನಗರದ ಲಕ್ಷ್ಮೀ ದೇವ­ಸ್ಥಾನ ಆವರಣದಲ್ಲಿ ಗುಲ್ಬರ್ಗ ವಿಶ್ವವಿ­ದ್ಯಾಲಯ ಮತ್ತು ಸರ್ಕಾರಿ ಪದವಿ ಮಹಾವಿದ್ಯಾಲಯಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ದೆಸೆಯಿಂದಲೆ ಜೀವನ­ದಲ್ಲಿ ಮಾನವೀಯ ಮೌಲ್ಯ ಮತ್ತು ಶಿಸ್ತನ್ನು ಅಳವಡಿಸಿಕೊಂಡಾಗ ಉತ್ತಮ ನಾಗರಿಕರಾಗಲು ಹೊರಹೊಮ್ಮಲು ಸಾಧ್ಯ. ಈ ನಿಟ್ಟಿನಲ್ಲಿ ಮಹಾತ್ಮಾ ಗಾಂಧೀಜಿ ಅವರ ಪರಿಕಲ್ಪನೆಯ ಮೇರೆಗೆ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ ಎಂದು ತಿಳಿಸಿದರು.

ಶಿಕ್ಷಣ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. ಅಜ್ಞಾನ­ವನ್ನು ಅಳಿಸಿ, ಸ್ವಾಭಿಮಾನದ ಜೀವನ ಸಾಗಿಸಲು ಪ್ರತಿಯೊಬ್ಬರು ಕಡ್ಡಾಯ­ವಾಗಿ ಶಿಕ್ಷಣ ಪಡೆದುಕೊಳ್ಳಬೇಕು. ಓದಿನ ಜೊತೆಯಲ್ಲಿ ಇಂತಹ ರಚನಾ­ತ್ಮಕ ಕಾರ್ಯದಲ್ಲಿ ತೊಡಗಿಸಿಕೊಂಡಾಗ ನಮ್ಮಲ್ಲಿನ ಮಾನಸಿಕ ಸ್ಥೆರ್ಯ ಹೆಚ್ಚಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯಗಳ ಆಶ್ರಯ­ದಲ್ಲಿ ನಡೆಯುತ್ತಿರುವ ಈ ವಿಶೇಷ ಶಿಬಿರದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಸರ್ಕಾರದ ಉದ್ದೇಶಗಳಿಗೆ ಬೆಲೆ ನೀಡಬೇಕು ಎಂದರು.

ಕಾಲೇಜಿನ ಹಳೆಯ ಹಾಗೂ ಹೊಸ ಕಟ್ಟಡಗಳಿಗೆ ಕಂಪೌಂಡ್‌ ಅಗತ್ಯವಾ­ಗಿದ್ದು, ಶಾಸಕರ ನಿಧಿಯಿಂದ ₹1 ಕೋಟಿ ನೀಡುವಂತೆ ಹಿರಿಯ ಪ್ರಾಧ್ಯಾ­ಪಕ ಡಾ. ಸುಭಾಷಚಂದ್ರ ಕೌಲಗಿ ಮಾಡಿದ ಮನವಿಗೆ ಸ್ಪಂದಿಸಿದ ಶಾಸಕ ಡಾ. ಮಾಲಕರಡ್ಡಿ, ಕಾಲೇಜುಗಳಿಗೆ ಕಂಪೌಂಡ್‌ ಅವಶ್ಯವಾಗಿದ್ದು, ತಮ್ಮ ನಿಧಿಯಿಂದ ₨ 50 ಲಕ್ಷ ಅನು­ದಾನ ಒದಗಿಸುವುದಾಗಿ ಭರವಸೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಶಂಕರ ಎ.ಬಿ. ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತಿನ ಬಗ್ಗೆ ಮತ್ತು ಸಮಾಜ ಸೇವೆಯ ಬಗ್ಗೆ ತಿಳಿಯಪಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾ­ಗುತ್ತಿದೆ ಎಂದು ತಿಳಿಸಿದರು.

ಜಿ.ಪಂ. ಮಾಜಿ ಸದಸ್ಯೆ ನಾಗರತ್ನ ಕುಪ್ಪಿ, ಮೌಲಾಲಿ ಅನಪುರ, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ ಗೂಳಿ, ಅಂಬಯ್ಯ ಶಾಬಾದಿ, ಬೀರನೂರ, ಮೋನಯ್ಯ ಕಲಾಲ್, ಡಾ.ಜಗ­ನ್ನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT