ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ಎಐಎಡಿಎಂಕೆ ವಿರುದ್ಧ ವಾಗ್ದಾಳಿ

Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಕರ್ನಾಟಕವು ಕಾವೇರಿ ನದಿಗೆ ಮೇಕೆ­ದಾಟು ಬಳಿ ಚೆಕ್‌ಡ್ಯಾಂ ನಿರ್ಮಾಣ ಮಾಡು­­ತ್ತಿರುವ  ವಿಷಯಕ್ಕೆ ಸಂಬಂಧಿ­ಸಿ­ದಂತೆ ಎಐಎಡಿಎಂಕೆ ನೇತೃ­ತ್ವದ ತಮಿಳು­ನಾಡು ಸರ್ಕಾರ ನಿರಾಶಕ್ತಿ ಹೊಂದಿದೆ ಎಂದು ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಆರೋಪಿಸಿದ್ದಾರೆ.

ಅಂತರರಾಜ್ಯ ನದಿ ವಿವಾದಕ್ಕೆ ಸಂಬಂ­ಧಿ­­ಸಿದಂತೆ ಕರ್ನಾಟಕವು ತಮಿಳುನಾಡು ಜನರ ಹಿತಾಶಕ್ತಿ ವಿರುದ್ಧ ನಡೆದು­ಕೊಳ್ಳು­ವುದರಲ್ಲಿ ಮುಂಚೂಣಿ­ಯಲ್ಲಿದೆ ಎಂದು ಅವರು ಆಪಾದಿ­ಸಿದ್ದಾರೆ.  ಈ ವಿಷಯದ ಬಗ್ಗೆ ನಿರಾಶಕ್ತಿ ಹೊಂದಿ­ರುವ ಸರ್ಕಾರದ ಕ್ರಮವನ್ನೂ ಅವರು ಖಂಡಿಸಿ­ದ್ದಾರೆ. ಮೇಕೆದಾಟು ಯೋಜನೆಯ ಬಗ್ಗೆ ವಿಶೇಷವಾಗಿ ಕಾವೇರಿ ನದಿ ಮುಖಜ ಪ್ರದೇಶದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.

ನವದೆಹಲಿ ವರದಿ: ಕರ್ನಾಟಕ ಮೇಕೆ­ದಾಟು ಬಳಿ ಕಾವೇರಿ ನದಿಗೆ ಅಡ್ಡ­ವಾಗಿ ನಿರ್ಮಿಸ­ಲಿರುವ 2ಅಣೆಕಟ್ಟೆಗಳು ಅಕ್ರಮ­ವಾ­ಗಿದ್ದು, ಕೇಂದ್ರ ಸರ್ಕಾರ ತಕ್ಷಣ ಅದಕ್ಕೆ ತಡೆ ಹಾಕಬೇಕು ಎಂದು ಡಿಎಂಕೆಯ ಸದಸ್ಯ ತಿರುಚಿ ಶಿವ ರಾಜ್ಯಸ­ಭೆಯಲ್ಲಿ ಶುಕ್ರವಾರ ಆಗ್ರಹಿಸಿದರು.

ಕಾವೇರಿ, ಮುಲ್ಲಪರಿಯಾರ್‌ ಸರ್ವಪಕ್ಷ ಸಭೆಗೆ ಒತ್ತಾಯ: ಮುಲ್ಲಪೆರಿಯಾರ್‌ ಮತ್ತು ಕಾವೇರಿ ಸೇರಿದಂತೆ ಅಂತರ­ರಾಜ್ಯಗಳಿಗೆ ಸಂಬಂಧಿ­ಸಿದ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಎಐಎಡಿಎಂಕೆ ಸರ್ಕಾರ ಸರ್ವಪಕ್ಷಗಳ ಸಭೆ ನಡೆಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

‘ಈ ಬಗ್ಗೆ ಪ್ರಧಾನಿ ಮತ್ತು ಕೇಂದ್ರ ಸಚಿ­ವರನ್ನು ಭೇಟಿ ಮಾಡಲು ಎಲ್ಲ ಪಕ್ಷಗಳ ಪ್ರತಿನಿಧಿಗಳ ನಿಯೋಗ­ವನ್ನು ದೆಹಲಿಗೆ ಕರೆದು­ಕೊಂಡು ಹೋಗ­ಬೇಕು’ ಎಂದು ಕಾಂಗ್ರೆಸ್‌ ರಾಜ್ಯ ಘಟ­ಕ ಅಧ್ಯಕ್ಷ ಇ.ವಿ.­ಕೆ.ಎಸ್‌ ಇಳಂ­ಗೋವನ್‌ ಹೇಳಿದ್ದಾರೆ. ಎಲ್ಲರ ಕಳವಳಕ್ಕೆ ಕಾರಣವಾಗಿರುವ ವಿಷಯಗಳ ಬಗ್ಗೆ ರಾಜ್ಯ ಸರ್ಕಾರವು ಇತರ ಪಕ್ಷಗಳ ನಾಯಕರ ಅಭಿಪ್ರಾಯ ಕೆಳದಿರುವುದು ತಪ್ಪು ಎಂದು ಪಿಎಂಕೆ ನಾಯಕ ರಾಮದಾಸ್‌ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT