ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರಿಗೆ ಚರಂಡಿ ನೀರು: ಆರೋಪ

Last Updated 19 ಏಪ್ರಿಲ್ 2014, 19:52 IST
ಅಕ್ಷರ ಗಾತ್ರ

ಕೃಷ್ಣರಾಜಪುರ : ‘ಒಂದು ತಿಂಗಳಿಂದ ರಾಮಮೂರ್ತಿ­ನಗರ 1ನೇ ಅಡ್ಡರಸ್ತೆ ನಿವಾಸಿಗಳಿಗೆ ಚರಂಡಿಯ ಕಲುಷಿತ ನೀರು ಮಿಶ್ರಿತ ಕಾವೇರಿ ನೀರು ಪೂರೈಕೆ­ಯಾಗುತ್ತಿದೆ. ಇದು ಕೆಟ್ಟ ವಾಸನೆ­ಯಿಂದ ಕೂಡಿದ್ದು ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರುತ್ತದೆ’ ಎಂದು ನಿವಾಸಿಗಳು ದೂರಿದರು.

‘ಮಳೆ ನೀರು ಕಾಲುವೆಯನ್ನು ಸ್ವಚ್ಛ­ಗೊಳಿಸಿಲ್ಲ. ಚರಂಡಿ ಕಟ್ಟಿಕೊಂಡಿದ್ದು ಸಂಗ್ರಹವಾದ ನೀರು ಸರಾಗವಾಗಿ ಹರಿ­ಯಲು ದಾರಿಯಿಲ್ಲ. ಹೀಗಾಗಿ ಕಾವೇರಿ ನೀರಿನ ಜತೆಗೆ ಚರಂಡಿ ನೀರು ಸೇರಿ ಕಲುಷಿತ­ಗೊಂಡಿದೆ. ಸಮಸ್ಯೆಯ ಬಗ್ಗೆ ಈಗಾಗಲೇ ಜಲ­ಮಂಡಳಿ ಅಧಿಕಾರಿ­ಗಳಿಗೆ ದೂರು ನೀಡಿದ್ದೇವೆ. ಆದರೆ ಇದು­ವರೆಗೂ ಕ್ರಮಗೊಂಡಿಲ್ಲ’ ಎಂದು ನಿವಾಸಿಗಳಾದ ಸುಧಾ, ಗೋಪಾಲ್ ದೂರಿದರು.

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಾಂತ ಪ್ರತಿಕ್ರಿಯಿಸಿ, ‘ಕಲುಷಿತ ನೀರು ಪೂರೈಕೆ­ಯಾಗು­ತ್ತಿ­ರುವ ಬಗ್ಗೆ ನಿವಾಸಿಗಳು ದೂರು ಸಲ್ಲಿಸಿ­ದ್ದಾರೆ. ಎರಡು ವರ್ಷಗಳ ಹಿಂದೆ ಕಾವೇರಿ ನೀರು ಪೂರೈಕೆಗೆ ಕೊಳವೆ ಅಳವಡಿಸಲಾಗಿದೆ. ಕೊಳವೆ ಮಾರ್ಗ­ದಲ್ಲಿ ಸಂಪರ್ಕ ಕಡಿತಗೊಂಡು ಅವ್ಯ­ವ­ಸ್ಥೆಗೆ ಕಾರಣ­ವಾಗಿರಬಹುದು. ಒಂದು ವಾರದಲ್ಲಿ ಸಮಸ್ಯೆಯನ್ನು ಬಗೆ­ಹರಿಸ­ಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT