ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಹುಲಿ ಅಭಯಾರಣ್ಯ: ಕರ್ನಾಟಕ ಸರ್ಕಾರ ನಿರಾಸಕ್ತಿ

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ತಾತ್ವಿಕ ಒಪ್ಪಿಗೆ ದೊರೆತ ನಂತ­ರವೂ ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿ ಅಭಯಾ­ರಣ್ಯ, ಪಕ್ಕದ ಮಲೆಮಹದೇಶ್ವರ ಬೆಟ್ಟ­ವನ್ನು ಹುಲಿ ಸಂರಕ್ಷಿತ ಅಭಯಾ­ರಣ್ಯ­ವ­ನ್ನಾಗಿ ಘೋಷಿಸಿ ಅಧಿಸೂಚನೆ ಹೊರಡಿ­ಸಲು ಕರ್ನಾಟಕ ಸರ್ಕಾರ ನಿರಾಸಕ್ತಿ ತೋರುತ್ತಿದೆ.

ಸುಮಾರು 20ಕ್ಕೂ ಹೆಚ್ಚು ಹುಲಿ­ಗಳಿ­ರುವ 2 ಸಾವಿರ ಚದರ ಕಿ.ಮೀ ವ್ಯಾಪ್ತಿ­ಯಲ್ಲಿನ ಈ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಅಭಯಾರಣ್ಯ  ಎಂದು ಘೋಷಿ­ಸಲು  ಪ್ರಾಧಿಕಾರದ ಸದಸ್ಯ  ಉಲ್ಲಾಸ್ ಕಾರಂತ ಪ್ರಸ್ತಾಪ ಸಲ್ಲಿಸಿದ್ದರು.

ಸ್ಥಳೀಯ ರಾಜಕಾರಣದಿಂದ ಕರ್ನಾ­ಟಕ ಸರ್ಕಾರ ಅಧಿಸೂಚನೆ ಹೊರಡಿಸಲು ಹಿಂದೇಟು ಹಾಕುತ್ತಿದೆ ಎಂದು ಮಂಗಳವಾರ ನಡೆದ ಪ್ರಾಧಿ­ಕಾ­ರದ ಸಭೆಯಲ್ಲಿ ಭಾಗವ­ಹಿಸಿದ ಅಧಿ­ಕಾರಿಯೊಬ್ಬರು ಹೇಳಿದರು.

ಕಾವೇರಿ ಮತ್ತು ಮಲೆಮಹದೇಶ್ವರ ಬೆಟ್ಟ ಅಭಯಾರಣ್ಯದ ಬಳಿಯ ಬಿಳಿಗಿರಿ ರಂಗನಾಥಸ್ವಾಮಿ ಟೆಂಪಲ್ (ಬಿಆರ್‌ಟಿ) ವನ್ಯಜೀವಿ ಅಭಯಾರಣ್ಯವನ್ನು 2010 ರಲ್ಲಿ ಹುಲಿ ಅಭಯಾರಣ್ಯ ಎಂದು ಘೋಷಿಸಲಾಗಿತ್ತು.

ಕುದುರೆಮುಖ ರಾಷ್ಟ್ರೀಯ ವನ್ಯ­ಧಾ­ಮ­­ವನ್ನು ಹುಲಿ ಅಭಯಾರಣ್ಯ ಎಂದು ಘೋಷಿ­ಸಲು ಕೇಂದ್ರದ ಅನುಮತಿ ದೊರೆ­ತಿದ್ದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುವುದು ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT