ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿ ದಾಖಲೆಯ ಮತದಾನ

ಬಹಿಷ್ಕಾರ ಕರೆ ಮಧ್ಯೆ ಶಾಂತಿಯುತ ಮತದಾನ
Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ, ಐಎಎನ್‌ಎಸ್‌): ಜಮ್ಮು–ಕಾಶ್ಮೀರ ಹಾಗೂ ಜಾರ್ಖಂಡ್‌ ರಾಜ್ಯಗಳ ವಿಧಾನಸಭೆ­ಗಳಿಗೆ ಮಂಗಳ­ವಾರ ನಡೆದ ಮೊದಲ ಹಂತದ ಚುನಾ­ವಣೆಯಲ್ಲಿ ಕ್ರಮವಾಗಿ ದಾಖಲೆಯ ಶೇ 71.28 ಮತ್ತು ಉತ್ತಮ ಎನ್ನಬಹುದಾದ ಶೇ 62ರಷ್ಟು ಶಾಂತಿಯುತ ಮತದಾನವಾಗಿದೆ.

ಜಮ್ಮು, ಕಾಶ್ಮೀರ ಹಾಗೂ ಲಡಾಖ್‌ ಪ್ರಾಂತ್ಯಗ­ಳಲ್ಲಿ ಇದೇ ಮೊದಲ ಬಾರಿಗೆ ಅತ್ಯಧಿಕ ದಾಖಲೆ ಪ್ರಮಾ­­ಣದ ಮತ­ದಾನ ನಡೆದಿದೆ. ಯಾವುದೇ ಹಿಂಸಾ­ತ್ಮಕ ಘಟ­ನೆ ನಡೆದ ವರದಿ­ಯಾ­ಗಿಲ್ಲ.

ಮತ­ದಾರರು ಚಳಿ­ಯನ್ನೂ ಲೆಕ್ಕಿಸದೆ, ಪ್ರತ್ಯೇಕ­ತಾ­ವಾದಿ­ಗಳ ಚುನಾ­ವಣೆ ಬಹಿ­ಷ್ಕಾರ ಕರೆ­ಯನ್ನು ತಿರ­ಸ್ಕರಿಸಿ ಮತದಾನ­ದಲ್ಲಿ ಪಾಲ್ಗೊಂ­ಡಿದ್ದರು.

ಮತದಾನ ನಡೆದ ಏಳು ಜಿಲ್ಲೆಗಳ 15 ಕ್ಷೇತ್ರ­ಗಳಲ್ಲಿ ಕಳೆದ (2008) ವಿಧಾನ­­ಸಭಾ ಚುನಾವಣೆಯಲ್ಲಿ ಶೇ 64.97­ರಷ್ಟು ಮತ್ತು ಲೋಕಸಭಾ ಚುನಾವಣೆ­ಯಲ್ಲಿ ಶೇ 52.63ರಷ್ಟು ಮತದಾನ­ವಾಗಿತ್ತು. ರಾಜ್ಯದ ರಂಬಾನ್‌­­­­ನಲ್ಲಿ 121 ವರ್ಷದ ವೃದ್ಧೆ ಮತ­­ದಾನ ಮಾಡಿರುವುದು ವಿಶೇಷ.

ಜಾರ್ಖಂಡ್‌ನಲ್ಲಿ ಮಾವೊವಾದಿ­ನಕ್ಸ­ಲರ ಚುನಾ­ವಣೆ ಬಹಿಷ್ಕಾರ ಕರೆ­ಯನ್ನು ಧಿಕ್ಕ­ರಿಸಿ ಮತದಾರರು ತಮ್ಮ ಮತ­ಗಳನ್ನು ಚಲಾಯಿಸಿದರು. ಮತ­ದಾನ ನಡೆದ 13 ಕ್ಷೇತ್ರ­ಗಳಲ್ಲಿ ಕಳೆದ (2009) ವಿಧಾ­ನ­ಸಭೆ ಮತ್ತು ಲೋಕ­ಸಭಾ ಚುನಾ­ವಣೆ­ಗಳಲ್ಲಿ ಶೇ 58ರಷ್ಟು ಮತ­ದಾನ­ವಾಗಿತ್ತು.

ಚುನಾವಣಾ ಆಯೋಗದ ಉಪ ಆಯು­ಕ್ತ­ರಾದ ವಿನೋದ್‌ ಜುಟ್ಷಿ ಮತ್ತು ಉಮೇಶ್‌ ಸಿನ್ಹಾ ಅವರು ಕ್ರಮ­ವಾಗಿ ಜಮ್ಮು–ಕಾಶ್ಮೀರ ಹಾಗೂ ಜಾರ್ಖಂಡ್‌ ಚುನಾವಣೆಗಳ ಕುರಿತು ಸುದ್ದಿ­­ಗಾರರಿಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT