ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಪಾಕ್‌ ಅಂಗ: ಬಿಲಾವಲ್‌

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಐಎಎನ್‌ಎಸ್‌): ಕಾಶ್ಮೀರ ಪಾಕಿ­ಸ್ತಾ­ನದ ಅಂಗ ಎಂದು ಪಾಕಿಸ್ತಾನ್‌ ಪೀಪಲ್ಸ್‌ ಪಕ್ಷದ (ಪಿಪಿಪಿ) ಅಧ್ಯಕ್ಷ ಬಿಲಾವಲ್‌ ಭುಟ್ಟೊ  ಹೇಳಿದ್ದಾ­ರೆಂದು ‘ಜಿಯೊ ನ್ಯೂಸ್‌’ ವಾಹಿನಿ ವರದಿ ಮಾಡಿದೆ.

ಸಾವಿರಾರು ಜನರು ಭಾಗ­ವಹಿಸಿದ್ದ ಕರಾಚಿಯ ಬಾಗ್‌–­ಎ–ಜಿನ್ನಾ ಉದ್ಯಾನದಲ್ಲಿ ಶನಿವಾರ ನಡೆದ ರ್‍್ಯಾಲಿ­ಯಲ್ಲಿ ಮಾತನಾಡಿದ ಅವರು, ‘ಕಾಶ್ಮೀರ ವಿವಾದ­ವನ್ನು ಒತ್ತೆ ಇರಿಸಿ ಈ  ವಿಷಯ ಕುರಿತು ಪಾಕ್‌ ಮತ್ತು ಭಾರತಗಳ ಮಾತು­ಕತೆಗೆ ನಾವು ಅವಕಾಶ ನೀಡುವುದಿಲ್ಲ.  ಭುಟ್ಟೊ ಸಿದ್ಧಾಂತವನ್ನು ಇಡೀ ವಿಶ್ವ ಮಾನ್ಯ ಮಾಡಿರುವುದರಿಂದ ಭಾರತದ ಮಾಧ್ಯಮಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿವೆ’ ಎಂದು ದೂರಿದ್ದಾರೆ.

ಭಾಷಣದಲ್ಲಿ ತಮ್ಮ ತಾಯಿ ಬೆನಜೀರ್‌ ಭುಟ್ಟೊ ಅವರನ್ನು ಸ್ಮರಿಸಿದ ಬಿಲಾವಲ್‌, ‘ದೇಶ­ವನ್ನಾಳಿದ ಮೊದಲ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡ­ಲಾಯಿತು. ಈ ಕೃತ್ಯ ಎಸಗಿದವರು ಶಸ್ತ್ರಗಳಿಂದ ನಮ್ಮನ್ನು ಮಣಿಸ­ಬಹುದು ಎಂದುಕೊಂಡಿದ್ದಾರೆ. ಆದರೆ, ಭುಟ್ಟೊ ಕುಟುಂಬ ಇಂತಹ­ದ್ದಕ್ಕೆಲ್ಲಾ ಹೆದರುವುದಿಲ್ಲ’ ಎಂದರು.

ಸೆಪ್ಟೆಂಬರ್‌ 20ರಂದು ಮುಲ್ತಾನ್ ಪ್ರಾಂತ್ಯದಲ್ಲಿ ನಡೆದ ರ್ಯಾಲಿ­ಯಲ್ಲೂ ಕಾಶ್ಮೀರ ಪಾಕಿ­ಸ್ತಾನದ ಅಂಗ ಎಂದಿದ್ದ ಬಿಲಾವಲ್‌, ‘ಒಂದಂಗುಲವೂ ಬಿಡದಂತೆ ಇಡೀ ಕಾಶ್ಮೀರವನ್ನು ಪಾಕ್‌ಗೆ ಸೇರಿಸುವೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT