ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಮತ್ತು ಜಾರ್ಖಂಡ್‌: ಇಂದು ಮೊದಲ ಹಂತದ ಮತದಾನ

Last Updated 24 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಶ್ರೀನಗರ/ ರಾಂಚಿ (ಪಿಟಿಐ): ಜಮ್ಮು- ಮತ್ತು ಕಾಶ್ಮೀರ ಹಾಗೂ ಜಾರ್ಖಂಡ್‌ ವಿಧಾನಸಭೆಯ  ಮೊದಲ ಹಂತದ ಚುನಾವಣೆ ಮಂಗಳವಾರ ನಡೆಯಲಿದೆ. ಜಮ್ಮು–ಕಾಶ್ಮೀರದ  15 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು 123 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಜಾರ್ಖಂಡ್‌ನ ನಕ್ಸಲ್‌ ಪೀಡಿತ 13 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.  ನ.25ರ ಮಂಗಳವಾರ­­ದಿಂದ ಡಿ.20ರವರೆಗೆ ಈ ಎರಡೂ ರಾಜ್ಯಗಳಲ್ಲಿ ಐದು ಹಂತದ ಚುನಾವಣೆ ನಡೆಯ­ಲಿದ್ದು, ಡಿ.25ಕ್ಕೆ ಫಲಿತಾಂಶ ಪ್ರಕಟ­ವಾಗಲಿದೆ.

ಜಮ್ಮು–ಕಾಶ್ಮೀರದ ಮೊದಲ ಹಂತದ ಚುನಾವಣೆಯಲ್ಲಿ ಏಳು ಸಚಿವರು ಸೇರಿದಂತೆ 12 ಶಾಸಕರು ಕಣದಲ್ಲಿದ್ದಾರೆ. ಬಿಜೆಪಿ-, ಪಿಡಿಪಿ- ನ್ಯಾಷನಲ್‌ ಕಾನ್ಫರೆನ್ಸ್‌- ಕಾಂಗ್ರೆಸ್‌ ನಡುವೆ ಹಣಾಹಣಿ ಏರ್ಪಟ್ಟಿದೆ. ಜಾರ್ಖಂಡ್‌ದಲ್ಲಿ ಬಿಜೆಪಿ- ಜೆಎಂಎಂ- ಕಾಂಗ್ರೆಸ್‌ ಮಿತ್ರಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಿದೆ.

ಭದ್ರತೆ ಸವಾಲು
ನವದೆಹಲಿ:
ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಖಂಡ್‌ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಮುಖ ನಾಯಕರ ಮೇಲೆ ದಾಳಿ ನಡೆಸುವುದಾಗಿ ನಕ್ಸಲರು ಮತ್ತು ಪಾಕಿಸ್ತಾನ ಉಗ್ರರು ಯೋಜನೆ ರೂಪಿಸಿರುವುದು ಭದ್ರತಾ ವ್ಯವಸ್ಥೆಗೆ ಸವಾಲಾಗಿದೆ.

ಗುಪ್ತಚರ ಸಂಸ್ಥೆಗಳ ಪ್ರಕಾರ, ಜೈಷೆ ಮೊಹಮ್ಮದ್‌ (ಜೆಇಎಂ) ಮತ್ತು ಹಿಜ್‌ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಗಳು ಚುನಾವಣೆ ಬಹಿಷ್ಕಾರದ ಬಗ್ಗೆ ಯೋಜಿ­ಸಿದ್ದು, ಲಷ್ಕರ್‌ ಎ ತಯಬಾ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ.

ಲಾಲು ಪ್ರಸಾದ್‌ ನೇತೃತ್ವದ ಆರ್‌ಜೆಡಿ ಮತ್ತು ಜಾರ್ಖಂಡ್‌ ವಿಕಾಸ್‌ ಮೋರ್ಚಾ ಮುಖಂಡರನ್ನು ಗುರಿ­­ಯಾ­ಗಿ­ಸಿಕೊಂಡು ಸಿಪಿಐ (ಮಾವೊವಾದಿ ಕಮ್ಯೂ­ನಿ­ಸ್ಟ್‌ಪಕ್ಷ) ದಾಳಿ ಸಂಚು ರೂಪಿಸಿದೆ ಎಂದು ಮತ್ತೊಂದು ಮೂಲ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT